Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 12000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

01/04/2026 8:52 AM

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 9 ಪ್ರಮುಖ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

01/04/2026 8:52 AM

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

01/04/2026 8:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 9 ಪ್ರಮುಖ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!
INDIA

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 9 ಪ್ರಮುಖ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

By kannadanewsnow5701/04/2026 8:52 AM

ನವದೆಹಲಿ : ಹೊಸ ಹಣಕಾಸು ವರ್ಷ 2026-27ರ ಆರಂಭದೊಂದಿಗೆ, ಇಂದು ಅಂದರೆ ಏಪ್ರಿಲ್ 1 ರಿಂದ ಹಲವು ಪ್ರಮುಖ ನಿಯಮಗಳು ಜಾರಿಗೆ ಬಂದಿವೆ. ಸರ್ಕಾರ ಮತ್ತು ವಿವಿಧ ಇಲಾಖೆಗಳು ನೀತಿಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ಇದು ಸಾಮಾನ್ಯ ಜನರ ದೈನಂದಿನ ಜೀವನ ಮತ್ತು ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.

ಕೆಲವೆಡೆ ತೆರಿಗೆಯಲ್ಲಿ ಸಮಾಧಾನ ಸಿಕ್ಕರೆ, ಮತ್ತೆ ಕೆಲವೆಡೆ ವೆಚ್ಚ ಹೆಚ್ಚಾಗಲಿದೆ. ಇಂದಿನಿಂದ ಜಾರಿಗೆ ಬಂದಿರುವ 9 ದೊಡ್ಡ ಬದಲಾವಣೆಗಳು ಇಲ್ಲಿವೆ:

ಹೊಸ ತೆರಿಗೆ ವ್ಯವಸ್ಥೆ ಜಾರಿ: ಈಗ ಹೊಸ ತೆರಿಗೆ ಪದ್ಧತಿಯು (New Tax Regime) ಸಂಪೂರ್ಣವಾಗಿ ಜಾರಿಗೆ ಬಂದಿದೆ. ಸಂಬಳ ಪಡೆಯುವವರಿಗೆ ₹12.75 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿರುತ್ತದೆ (ಸೆಕ್ಷನ್ 87A ಅಡಿಯಲ್ಲಿ), ಆದರೆ ಇತರರಿಗೆ ಈ ಮಿತಿಯನ್ನು ₹12 ಲಕ್ಷ ಎಂದು ನಿಗದಿಪಡಿಸಲಾಗಿದೆ.

TDS ನ ಹೊಸ ಫಾರ್ಮ್‌ಗಳು: ಇಂದಿನಿಂದ TDS ಗಾಗಿ ಫಾರ್ಮ್ 16/16A ಬದಲಿಗೆ ಹೊಸ ಫಾರ್ಮ್ 130 ಮತ್ತು 131 ಜಾರಿಗೆ ಬಂದಿವೆ. ಇವುಗಳಲ್ಲಿ ತೆರಿಗೆಯ ಮಾಹಿತಿ ಹೆಚ್ಚು ವಿವರವಾಗಿ ಇರಲಿದ್ದು, ಇದರಿಂದ ITR ಸಲ್ಲಿಸುವುದು ಸುಲಭವಾಗಲಿದೆ.

PNB ಎಟಿಎಂನಿಂದ ನಗದು ಹಿಂಪಡೆಯುವ ಮಿತಿ ಕಡಿತ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಎಟಿಎಂನಿಂದ ನಗದು ಹಿಂಪಡೆಯುವ ಮಿತಿಯನ್ನು ಕಡಿಮೆ ಮಾಡಿದೆ. ಈಗ ಕ್ಲಾಸಿಕ್ ಕಾರ್ಡ್‌ನಿಂದ ₹25,000 ಮತ್ತು ಪ್ಲಾಟಿನಂ ಕಾರ್ಡ್‌ನಿಂದ ₹50,000 ವರೆಗೆ ಮಾತ್ರ ನಗದು ಹಿಂಪಡೆಯಬಹುದು.

ಪಾನ್ ಕಾರ್ಡ್ ನಿಯಮ ಕಟ್ಟುನಿಟ್ಟು: ಈಗ ಪಾನ್ ಕಾರ್ಡ್ ಪಡೆಯಲು ಅಥವಾ ಹುಟ್ಟಿದ ದಿನಾಂಕವನ್ನು ಅಪ್‌ಡೇಟ್ ಮಾಡಲು ಆಧಾರ್ ಕಾರ್ಡ್ ಮಾನ್ಯವಾಗುವುದಿಲ್ಲ. ಇದಕ್ಕಾಗಿ 10ನೇ ತರಗತಿಯ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.

ರೈಲ್ವೆ ಮರುಪಾವತಿ (Refund) ನಿಯಮ ಬದಲಾವಣೆ: ರೈಲು ಟಿಕೆಟ್ ರದ್ದುಗೊಳಿಸಿದಾಗ ಮರುಪಾವತಿ ಪಡೆಯಲು ಈಗ ಕನಿಷ್ಠ 8 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು. ಆದರೆ, ಬೋರ್ಡಿಂಗ್ ಸ್ಟೇಷನ್ ಬದಲಾಯಿಸುವ ಸೌಲಭ್ಯವು ರೈಲು ಹೊರಡುವ 30 ನಿಮಿಷಗಳ ಮೊದಲೆ ಪಡೆಯಬಹುದು.

FASTag ದುಬಾರಿ: ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಈಗ ದುಬಾರಿಯಾಗಿದೆ. ₹3,000 ರ ಬದಲಿಗೆ ಈಗ ₹3,075 ಪಾವತಿಸಬೇಕಾಗುತ್ತದೆ, ಇದು 200 ಪ್ರಯಾಣಗಳಿಗೆ ಅನ್ವಯಿಸುತ್ತದೆ.

ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸಂಪೂರ್ಣ ಬಂದ್: ಇಂದಿನಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಲ್ಲಿಸಲಾಗಿದೆ. ಈಗ ಕೇವಲ FASTag ಅಥವಾ UPI ಮೂಲಕ ಮಾತ್ರ ಪಾವತಿ ಮಾಡಬೇಕಾಗುತ್ತದೆ.

ಗ್ಯಾಸ್ ಸಿಲಿಂಡರ್ ಮತ್ತು ATF ನ ಹೊಸ ದರಗಳು: ಇಂದು ಬೆಳಿಗ್ಗೆ 6 ಗಂಟೆಯಿಂದ ಎಲ್‌ಪಿಜಿ (LPG) ಸಿಲಿಂಡರ್ ಮತ್ತು ವಿಮಾನ ಇಂಧನ (ATF) ಹೊಸ ಬೆಲೆಗಳು ಜಾರಿಗೆ ಬಂದಿವೆ. ಇದರಿಂದ ರೆಸ್ಟೋರೆಂಟ್‌ಗಳಲ್ಲಿ ಊಟ ಮತ್ತು ವಿಮಾನ ಪ್ರಯಾಣ ದುಬಾರಿಯಾಗಬಹುದು.

ವಾಹನಗಳ ಬೆಲೆ ಏರಿಕೆ: ಆಟೋ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಶೇ. 2-3 ರಷ್ಟು ಹೆಚ್ಚಿಸಿವೆ. ಮಾರ್ಚ್ 31 ರೊಳಗೆ ಬಿಲ್ ಆಗದ ವಾಹನಗಳಿಗೆ ಈಗ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

Attention public: These 9 important rules have changed from today with a direct impact on your pocket!
Share. Facebook Twitter LinkedIn WhatsApp Email

Related Posts

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 12000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

01/04/2026 8:52 AM1 Min Read

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ಸಂಬಂಧಗಳಿಗೂ ಸಿಗಲಿದೆ ದಂಪತಿ ಸ್ಥಾನಮಾನ; ಅಧಿಕೃತವಾಗಿ ‘ವಿವಾಹಿತರು’ ಎಂದು ಪರಿಗಣನೆ!

01/04/2026 8:29 AM1 Min Read

ಇರಾಕ್‌ನಲ್ಲಿ ಅಮೆರಿಕದ ಖ್ಯಾತ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ: ಭಯಾನಕ ವಿಡಿಯೋ ವೈರಲ್; ಓರ್ವ ಶಂಕಿತ ಉಗ್ರನ ಬಂಧನ!

01/04/2026 8:20 AM1 Min Read
Recent News

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 12000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

01/04/2026 8:52 AM

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 9 ಪ್ರಮುಖ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

01/04/2026 8:52 AM

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

01/04/2026 8:30 AM

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ಸಂಬಂಧಗಳಿಗೂ ಸಿಗಲಿದೆ ದಂಪತಿ ಸ್ಥಾನಮಾನ; ಅಧಿಕೃತವಾಗಿ ‘ವಿವಾಹಿತರು’ ಎಂದು ಪರಿಗಣನೆ!

01/04/2026 8:29 AM
State News
KARNATAKA

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

By kannadanewsnow5701/04/2026 8:30 AM KARNATAKA 1 Min Read

ಬೆಂಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ. ಈ ಕಡು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವುದು ದೊಡ್ಡ ಸವಾಲು. ಇಂತಹ…

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: ಇನ್ಮುಂದೆ ಮುಂಬಡ್ತಿಗೆ ‘ತರಬೇತಿ’ ಕಡ್ಡಾಯ!

01/04/2026 8:24 AM

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

01/04/2026 8:12 AM

ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ‘ಎಸ್‌ಆರ್‌ಕೆ ಜೊತೆ ಸಂಭ್ರಮ’ ಅಭಿಯಾನಕ್ಕೆ ಹೊಸ ಮೆರುಗು: ಜಾಹೀರಾತು ಫಲಕದಲ್ಲೇ ನೇರ ಪಾರ್ಟಿ ಅನುಭವ

01/04/2026 8:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.