2011ರ ನಂತರ (ಅಂದರೆ 15 ವರ್ಷಗಳ ಬಳಿಕ) ನಡೆಯುತ್ತಿರುವ ಈ ಜನಗಣತಿಯು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ. 2027ರ ಜನಗಣತಿಯ ಮೊದಲ ಹಂತದ ಪ್ರಕ್ರಿಯೆಯು ಎರಡು ತಿಂಗಳ ಕಾಲ ನಡೆಯಲಿದೆ.
ಏಪ್ರಿಲ್ 1 ರ ಇಂದಿನಿಂದ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಇಂದಿನಿಂದ ಆರಂಭವಾಗಿದ್ದು, ಏಪ್ರಿಲ್ 5 ರಿಂದ ಉಳಿದ ರಾಜ್ಯಗಳಲ್ಲಿ ಶುರುವಾಗಲಿದೆ.
ಏನಿದು ಡಿಜಿಟಲ್ ಗಣತಿ?
ಗಣತಿದಾರರು ಸ್ಮಾರ್ಟ್ಫೋನ್ ಬಳಸಿ ನೇರವಾಗಿ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ. ಜನರಿಗೂ ಸಹ ವೆಬ್ಸೈಟ್ ಮೂಲಕ ಸ್ವಯಂ ಮಾಹಿತಿ ನೀಡಲು ಅವಕಾಶವಿದೆ.
ಗಣತಿಯ ಹಂತಗಳು
ಏಪ್ರಿಲ್ 1 – 15: ಸಾರ್ವಜನಿಕರು ವೆಬ್ಸೈಟ್ ಮೂಲಕ ತಾವಾಗಿಯೇ ಮಾಹಿತಿ ದಾಖಲಿಸುವ ‘ಸ್ವಯಂ ಗಣತಿ’ ಅವಧಿ.
ಏಪ್ರಿಲ್ 15 – ಮೇ 15: ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಮಾಡುವ ಮತ್ತು ಮಾಹಿತಿ ಸಂಗ್ರಹಿಸುವ ‘ಮನೆ ಸೆನ್ಸಸ್’ ಅವಧಿ.
ಮುಂದಿನ ಹಂತ: ಜನರಿಂದ ಮಾಹಿತಿ ಸಂಗ್ರಹಿಸುವ ಪ್ರಮುಖ ಹಂತವು ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ.
ಇಂದಿನಿಂದ ಎಲ್ಲೆಲ್ಲಿ ಶುರು? (8 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು)
ಕರ್ನಾಟಕ
ಅಂಡಮಾನ್
ಗೋವಾ
ಸಿಕ್ಕಿಂ
ಒಡಿಶಾ
ಲಕ್ಷದ್ವೀಪ
ಮಿಜೋರಾಂ
ದೆಹಲಿ
ಸಾರ್ವಜನಿಕರು ಭಾಗವಹಿಸುವುದು ಹೇಗೆ?
ಇದು ದೇಶದ ಮೊದಲ ವೆಬ್ ಆಧಾರಿತ ಸ್ವಯಂ ಗಣತಿಯಾಗಿದೆ.
ಜನರು ಆನ್ಲೈನ್ನಲ್ಲಿ ತಮ್ಮ ವಿವರಗಳನ್ನು ತಾವೇ ಭರ್ತಿ ಮಾಡಬಹುದು.
ಒಟ್ಟು 16 ಭಾಷೆಗಳಲ್ಲಿ ಮಾಹಿತಿ ನೀಡಲು ಅವಕಾಶವಿದೆ.
ಮೊದಲು se.census.gov.in ವೆಬ್ಸೈಟ್ಗೆ ಲಾಗಿನ್ ಆಗಬೇಕು.
ಪೋರ್ಟಲ್ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ, ಪ್ರಾಥಮಿಕ ಮಾಹಿತಿ ಒದಗಿಸಿ ಗಣತಿ ನಿಗದಿಪಡಿಸಿಕೊಳ್ಳಬೇಕು.
ಗಣತಿಯ ಅಂಕಿ-ಅಂಶಗಳು
ಗಣತಿದಾರರು: ಸುಮಾರು 30 ಲಕ್ಷ ಮಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಒಟ್ಟು ವೆಚ್ಚ: ಗಣತಿಗಾಗಿ ₹11,718 ಕೋಟಿ ಹಣವನ್ನು ನಿಗದಿಪಡಿಸಲಾಗಿದೆ.
ವ್ಯಾಪ್ತಿ: 7092 ಉಪ ಜಿಲ್ಲೆಗಳು, 5128 ಪಟ್ಟಣಗಳು ಮತ್ತು 6,39,902 ಗ್ರಾಮಗಳಲ್ಲಿ ಗಣತಿ ಕಾರ್ಯ ನಡೆಯಲಿದೆ.
ಗಮನಿಸಿ: ಸ್ವಯಂ ಗಣತಿ ಮಾಡಿಕೊಂಡ ಬಳಿಕವೂ ಗಣತಿದಾರರು ಮನೆಗೆ ಬರುತ್ತಾರೆ. ಆ ಸಮಯದಲ್ಲಿ ಮನೆಯ ಪರಿಸ್ಥಿತಿ ಮತ್ತು ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಪರಿಶೀಲಿಸಿ ಸಂಗ್ರಹಿಸುತ್ತಾರೆ.








