ಶಿವಮೊಗ್ಗ: ಆಧುನಿಕತೆಯ ಭರಾಟೆಯಲ್ಲಿ ಕಲೆಯ ಮಹತ್ವವನ್ನು ನಿಧಾನವಾಗಿ ನಾವು ಕಳೆದುಕೊಳ್ಳುತ್ತಿದ್ದೇವೆ. ಸಿನಿಮಾ ಸಂಗೀತಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿದೆ ಹಲವು ಸವಾಲುಗಳ ಮಧ್ಯಯೂ ಜಾನಪದ ಸಂಗೀತ ತನ್ನ ಮಹತ್ವವನ್ನು ಪರಿಚಯಿಸುತ್ತಿದೆ ಎಂದು ಕಾಂತಾರ ಸಿನಿಮಾ ಗಾಯಕ ವೆಂಕಟೇಶ್ ಡಿ.ಸಿ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ಸಾಗರ ತಾಲ್ಲೂಕು ಘಟಕದ ವತಿಯಿಂದ ‘ಕಲಿಯೋಣ ಜಾನಪದ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದಂತ ಅವರು, ಅವಸರದ ಬದುಕಿನಲ್ಲಿ ಎಲ್ಲವೂ ತಕ್ಷಣ ತಿಳಿದುಕೊಳ್ಳ ಬೇಕು ಎನ್ನುವ ತವಕ ಹೆಚ್ಚುತ್ತಿದೆ. ಆದರೆ ಸಂಗೀತದ ಸಿದ್ದಿಗೆ ನಿರಂತರತೆ ಬೇಕು ,ನಾನು ಅನೇಕ ಸಿನಿಮಾಗಳಿಗೆ ಹಾಡಿದ್ದೇನೆ ಸಂಗೀತ ನಿರ್ದೇಶನವನ್ನು ಮಾಡಿದ್ದೇನೆ. ಸಿನಿಮಾ ಜಗತ್ತಿನಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಸುಲಭವಲ್ಲ ಇಲ್ಲಿ ಅವಕಾಶಗಳೂ ದೊರೆಯಬೇಕು ಅದೃಷ್ಟವೂ ಇರಬೇಕು, ಕಾಂತಾರ ಸಿನಿಮಾದಲ್ಲಿ ನಾನು ಹಾಡಿದ ಗೀತೆಗಳು ಜನಪ್ರಿಯ ಗೊಂಡವು, ಈ ಸಿನಿಮಾದಲ್ಲಿರುವ ಜಾನಪದದ ಚಿಂತನೆ ಜನತೆಯನ್ನು ಯಶಸ್ವಿಯಾಗಿ ತಲುಪಿದೆ. ಜಾನಪದ ಕಲೆ ಎಲ್ಲ ಕಲೆಗಳಿಗೆ ಮೂಲ ಬೇರು ಅದನ್ನು ಬಿಟ್ಟು ಸಂಗೀತವನ್ನು ವರ್ಗೀಕರಿಸಲು ಸಾಧ್ಯವಿಲ್ಲ ಎಂದರು.
ಪ್ರತೀ ವಾರ ಜಾನಪದ ಕಲಿಕೆಯ ಕಾರ್ಯ ಕ್ರಮವನ್ನು ನೀವು ನಡೆಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಮಲೆನಾಡಿನ ಪ್ರಕೃತಿಯೇ ಕಲಾವಿದರನ್ನು ಬೆಳಸುತ್ತದೆ ನಿಮ್ಮ ಸಂಘಟನೆಯ ಕಾರ್ಯಕ್ರಮಗಳು ಯಶಸ್ವಿಯಾಗಲ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಮಾತನಾಡಿ, ಜಾನಪದ ಜಗತ್ತು ನಿರಂತರವಾಗಿ ಕಲಾವಿದರ ಮೇಲೆ ಪ್ರಭಾವವನ್ನು ಬೀರುತ್ತಲ್ಲೆ ಬಂದಿದೆ ಇದು ಶ್ರಮ ಸಂಸ್ಕೃತಿಯ ಪ್ರತೀಕ. ಮನುಶ್ಯನ ಸಾಂಸ್ಕೃತಿಕ ಚರಿತ್ರೆಗೂ ಜಾನಪದ ಕಲೆಗಳ ಆರಂಭಕ್ಕೂ ಅವಿನಾಭಾವ ಸಂಭoದವಿದೆ ಜಾನಪದ ಸಂಗೀತಕ್ಕೆ ನಿರ್ಧಿಷ್ಟ ತರಗತಿಗಳಿಲ್ಲ ಆಯಾ ಪ್ರದೇಶಕ್ಕೆ ಅನುಗುಣವಾಗಿ ಭಿನ್ನತೆಯನ್ನು ನಾವು ಕಾಣುತ್ತೇವೆ. ಸರ್ಕಾರ ಮತ್ತು ವಿಶ್ವ ವಿದ್ಯಾಲಯಗಳು ಮಾಡಬೇಕಾಗಿರುವ ಕೆಲಸವನ್ನು ಸಾಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ಮಾಡುತಿದ್ದು ಪ್ರತೀ ವಾರವೂ ಹೊಸ ಜಾನಪದ ಗೀತೆಗಳು ಸಾಂಪ್ರದಾಯಿಕ ಹಾಡುಗಳನ್ನು ಕಲಿಸುವ ಕೆಲಸ ಮಾಡುತ್ತಿರುವುದಿ ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ಸಾಗರ ಶಾಲೆಯ ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ ಅಭಿನಂದನಾ ಮಾತುಗಳನ್ನಾಡಿ ಕಾಂತಾರ ಸಿನಿಮಾದ ಜೊತೆಯಲ್ಲಿ ಅನೇಕ ಸಿನಿಮಾಗಳಿಗೆ ಗಾಯಕರಾಗಿ ಯಶಸ್ಸಿನತ್ತ ಸಾಗುತ್ತಿರುವ ವೆಂಕಟೇಶ್ ಡಿ.ಸಿ ಅವರನ್ನು ಇಂದು ನಾವು ಅಭಿನಂದಿಸಿ ಅವರ ಗಾಯನವನ್ನು ಕೇಳುವ ಮೂಲಕ ಅನುಭವನ್ನು ಹಂಚಿಕೊoಡಿದ್ದೇವೆ. ಅವರು ನಮ್ಮೂರಿನ ಅಳಿಯ ಎನ್ನುವುದು ಕೂಡ ಅತ್ಯಂತ ಸಂತೋಷದ ಸಂಗತಿ. ಕಲಾವಿದರೂ ಮತ್ತು ಕಲೆ ಸದಾ ಪರಸ್ಪರ ಮುಖಾ ಮುಖಿಯಾಗುತ್ತಿದ್ದರೆ ಹೊಸ ಪ್ರಯೋಗಗಳು ಹುಟ್ಟಿಕೊಳ್ಳುತ್ತದೆ ಯಶಸ್ಸಿನತ್ತ ಸಾಗುತ್ತದೆ ಎಂದರು.
ಸಭಾ ಕಾರ್ಯಕ್ರಮದ ನಂತರ ಗಾಯಕ ವೆಂಕಟೇಶ್ ಡಿಸಿ ಅವರು ಕಾಂತಾರ ಸಿನಿಮಾದ ಗೀತೆಯನ್ನು ಹಾಡಿ ಕಲಾವಿದರ ಜೊತೆ ಸಂವಾದ ನಡೆಸಿದರು.
ಈ ವೇಳೆ ಶೃoಗೇರಿ ಶಂಕರ ಮಠ ಸಾಗರ ಶಾಖೆಯ ಧರ್ಮಾಧಿಕಾರಿ ಅಶ್ವಿನಿ ಕುಮಾರ್, ಉಪನ್ಯಾಸಕ ಡಾ|| ರತ್ನಾಕರ್ ಕುನುಗೋಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ದಿನೇಶ್ ಬರದವಳ್ಳಿ, ಪ್ರಧಾನ ಕಾರ್ಯದರ್ಶಿ ನಾರಾಯಣ್, ರಾಜು ಜನ್ನೇಹಕ್ಕಲು, ನಾರಾಯಣಪ್ಪ ಕುಗ್ವೆ, ಬಸವರಾಜ್, ಪ್ರಭಾ ವೆಂಕಟೆಶ್, ಉಷಾರಾಣಿ, ಮಹಾಬಲ ಶೇಟ್, ಮೀನಾಕ್ಷಿ ಇತರರು ಹಾಜರಿದ್ದು.
BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಹಾಲುಣಿಸಿದ ಕೆಲವೇ ಕ್ಷಣದಲ್ಲೇ ಹಸುಗೂಸಿನ ತಾಯಿ ಸಾವು








