Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೆಲವೇ ಕ್ಷಣಗಳಲ್ಲಿ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಸಿಎಂ ಭಾಗಿ : ಕರ್ನಾಟಕ ಜನತೆಯ ಚಿತ್ತ ದೆಹಲಿಯತ್ತ!

ALERT : ನೀವೂ ಮೊಬೈಲ್ ತಲೆ ಹತ್ತಿರ ಇಟ್ಟುಕೊಂಡು ಮಲಗುತ್ತೀರಾ? ಹಾಗಾದ್ರೆ ಈ ಶಾಕಿಂಗ್ ವಿಷಯ ತಿಳಿಯಲೇಬೇಕು!

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಗ್ಯಾಸ್ ಸಿಲಿಂಡರ್ ಸಪ್ಲೈ, ಸಬ್ಸಿಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ಸರ್ಕಾರದಿಂದ ಸುಂಕ ಭಾರಿ ಕಡಿತ : ಆದ್ರೂ ಪೆಟ್ರೋಲ್-ಡೀಸೆಲ್ ದರ ಇಳಿಯಲ್ಲ !
KARNATAKA

ಕೇಂದ್ರ ಸರ್ಕಾರದಿಂದ ಸುಂಕ ಭಾರಿ ಕಡಿತ : ಆದ್ರೂ ಪೆಟ್ರೋಲ್-ಡೀಸೆಲ್ ದರ ಇಳಿಯಲ್ಲ !

By kannadanewsnow57

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತೈಲ ಕಂಪನಿಗಳನ್ನು ನಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನು ಪ್ರತಿ ಲೀಟರ್‌ಗೆ ತಲಾ 10 ರೂ.ಗಳಷ್ಟು ಕಡಿತಗೊಳಿಸಿದೆ. ಆದರೆ, ಇದರ ನೇರ ಲಾಭ ತೈಲ ಮಾರಾಟ ಸಂಸ್ಥೆಗಳಿಗೆ ಮಾತ್ರ ಸಿಗಲಿದ್ದು, ಬಂಕ್‌ಗಳಲ್ಲಿ ಗ್ರಾಹಕರಿಗೆ ಪೆಟ್ರೋಲ್ ಅಥವಾ ಡೀಸೆಲ್ ದರ ಇಳಿಕೆಯಾಗುವುದಿಲ್ಲ.

ದರ ಇಳಿಕೆ ಯಾಕಿಲ್ಲ?

ಮಧ್ಯಪ್ರಾಚ್ಯ ಸಂಘರ್ಷದ ಕಾರಣದಿಂದಾಗಿ ಯುದ್ಧಪೂರ್ವದಲ್ಲಿ ಪ್ರತಿ ಬ್ಯಾರೆಲ್‌ಗೆ 70 ಡಾಲರ್ ಇದ್ದ ಕಚ್ಚಾತೈಲದ ದರ ಇದೀಗ 100 ಡಾಲರ್‌ಗೆ ಏರಿಕೆಯಾಗಿದೆ (ಕಳೆದ ಒಂದು ತಿಂಗಳಲ್ಲೇ 30 ಡಾಲರ್ ಹೆಚ್ಚಳ). ಇದರಿಂದ ದೇಶೀಯ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿದ್ದವು. ಈ ನಷ್ಟವನ್ನು ಸರಿದೂಗಿಸಲು ಮತ್ತು ತೈಲ ಬೆಲೆ ಹೆಚ್ಚಳವನ್ನು ತಡೆಯಲೆಂದೇ ಸರ್ಕಾರ ಈ ಸುಂಕ ಕಡಿತ ಮಾಡಿದೆ. ಈ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನು ತೈಲ ಕಂಪನಿಗಳು ಸರ್ಕಾರಕ್ಕೆ ಪಾವತಿಸುತ್ತಿದ್ದವು. ಈಗ ಆ ಮೊತ್ತವನ್ನು ತೈಲ ಕಂಪನಿಗಳು ತಮ್ಮ ಗರಿಷ್ಠ ಮಾರಾಟ ದರದಲ್ಲೇ ಸರಿದೂಗಿಸಿಕೊಳ್ಳಲಿವೆ. ಹೀಗಾಗಿ ಗ್ರಾಹಕರಿಗೆ ಬೆಲೆ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ.

ಸುಂಕದ ಪ್ರಮಾಣ ಈಗ ಎಷ್ಟಿದೆ?

ಕೇಂದ್ರದ ಈ ನಿರ್ಧಾರದಿಂದಾಗಿ ಸುಂಕದ ಪ್ರಮಾಣದಲ್ಲಿ ಈ ಕೆಳಗಿನಂತೆ ಬದಲಾವಣೆಯಾಗಿದೆ:

ಪೆಟ್ರೋಲ್: ಈವರೆಗೆ ವಿಧಿಸಲಾಗುತ್ತಿದ್ದ 13 ರೂ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಈಗ ಕೇವಲ 3 ರೂ.ಗೆ ಇಳಿಕೆಯಾಗಿದೆ. ಒಟ್ಟಾರೆ ಅಬಕಾರಿ ಸುಂಕ 21.90 ರೂ. ನಿಂದ 11.90 ರೂ.ಗೆ ಇಳಿಕೆಯಾಗಿದೆ.

ಡೀಸೆಲ್: ಈವರೆಗೆ ವಿಧಿಸಲಾಗುತ್ತಿದ್ದ 10 ರೂ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ (ಶೂನ್ಯಕ್ಕೆ ಇಳಿಕೆ). ಒಟ್ಟಾರೆ ಸುಂಕ 17.80 ರೂ. ನಿಂದ 7.80 ರೂ.ಗೆ ಇಳಿಕೆಯಾಗಿದೆ.

ಸರ್ಕಾರಕ್ಕೆ ಭಾರಿ ಆದಾಯ ನಷ್ಟ

ದೇಶದಲ್ಲಿ ವಾರ್ಷಿಕವಾಗಿ ಅಂದಾಜು 17,500 ಕೋಟಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತದೆ. ಈ ಭಾರಿ ಪ್ರಮಾಣದ ಸುಂಕ ಕಡಿತದಿಂದಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಸುಮಾರು 1.75 ಲಕ್ಷ ಕೋಟಿ ರೂ.ಗಳಷ್ಟು ಆದಾಯ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

15 ದಿನಕ್ಕೊಮ್ಮೆ ದರ ಪರಿಷ್ಕರಣೆ?

ಕಚ್ಚಾತೈಲದ ಬೆಲೆ ನಿರಂತರವಾಗಿ ಭಾರಿ ಏರಿಳಿತ ಕಾಣುತ್ತಿರುವ ಕಾರಣ, ಇನ್ನು ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಶೀಲಿಸಲಾಗುವುದು ಎಂದು ಶುಕ್ರವಾರ ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಇನ್ನು ಮುಂದೆ ತಿಂಗಳಿಗೆ ಕನಿಷ್ಠ 2 ಬಾರಿ ತೈಲ ದರಗಳು ಏರಿಳಿತ ಕಾಣುವ ಸಂಭವವಿದೆ.

Huge duty cut by the central government: Still petrol-diesel prices will not come down!
Share. Facebook Twitter LinkedIn WhatsApp Email

Related Posts

BREAKING : ಕೆಲವೇ ಕ್ಷಣಗಳಲ್ಲಿ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಸಿಎಂ ಭಾಗಿ : ಕರ್ನಾಟಕ ಜನತೆಯ ಚಿತ್ತ ದೆಹಲಿಯತ್ತ!

2 Mins Read

ALERT : ನೀವೂ ಮೊಬೈಲ್ ತಲೆ ಹತ್ತಿರ ಇಟ್ಟುಕೊಂಡು ಮಲಗುತ್ತೀರಾ? ಹಾಗಾದ್ರೆ ಈ ಶಾಕಿಂಗ್ ವಿಷಯ ತಿಳಿಯಲೇಬೇಕು!

2 Mins Read

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಗ್ಯಾಸ್ ಸಿಲಿಂಡರ್ ಸಪ್ಲೈ, ಸಬ್ಸಿಡಿ!

2 Mins Read
Recent News

BREAKING : ಕೆಲವೇ ಕ್ಷಣಗಳಲ್ಲಿ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಸಿಎಂ ಭಾಗಿ : ಕರ್ನಾಟಕ ಜನತೆಯ ಚಿತ್ತ ದೆಹಲಿಯತ್ತ!

ALERT : ನೀವೂ ಮೊಬೈಲ್ ತಲೆ ಹತ್ತಿರ ಇಟ್ಟುಕೊಂಡು ಮಲಗುತ್ತೀರಾ? ಹಾಗಾದ್ರೆ ಈ ಶಾಕಿಂಗ್ ವಿಷಯ ತಿಳಿಯಲೇಬೇಕು!

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಗ್ಯಾಸ್ ಸಿಲಿಂಡರ್ ಸಪ್ಲೈ, ಸಬ್ಸಿಡಿ!

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು : ತಪ್ಪಿದ ಭಾರಿ ಅನಾಹುತ!

State News
KARNATAKA

BREAKING : ಕೆಲವೇ ಕ್ಷಣಗಳಲ್ಲಿ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಸಿಎಂ ಭಾಗಿ : ಕರ್ನಾಟಕ ಜನತೆಯ ಚಿತ್ತ ದೆಹಲಿಯತ್ತ!

By ಸುರೇಶ್‌ KARNATAKA 2 Mins Read

ನವದೆಹಲಿ: ಕರ್ನಾಟಕ ರಾಜ್ಯ ರಾಜಕಾರಣದ ಕೇಂದ್ರ ಬಿಂದು ಸದ್ಯಕ್ಕೆ ಬೆಂಗಳೂರಿನಿಂದ ದೇಶದ ರಾಜಧಾನಿ ನವದೆಹಲಿಗೆ ಶಿಫ್ಟ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ…

ALERT : ನೀವೂ ಮೊಬೈಲ್ ತಲೆ ಹತ್ತಿರ ಇಟ್ಟುಕೊಂಡು ಮಲಗುತ್ತೀರಾ? ಹಾಗಾದ್ರೆ ಈ ಶಾಕಿಂಗ್ ವಿಷಯ ತಿಳಿಯಲೇಬೇಕು!

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಗ್ಯಾಸ್ ಸಿಲಿಂಡರ್ ಸಪ್ಲೈ, ಸಬ್ಸಿಡಿ!

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು : ತಪ್ಪಿದ ಭಾರಿ ಅನಾಹುತ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.