ಟೆಹ್ರಾನ್/ಜೆರುಸಲೆಮ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ತುದಿಗೇರಿದೆ. ಅಮೆರಿಕ ವಿಧಿಸಿದ್ದ ಗಡುವು ಮುಗಿಯುತ್ತಿದ್ದಂತೆಯೇ, ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಈ ಬೆಳವಣಿಗೆಯಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ವ್ಯಾಪಿಸುವ ಆತಂಕ ಎದುರಾಗಿದೆ.
ಇಸ್ರೇಲ್‌ನ ಯುದ್ಧ ವಿಮಾನಗಳು ಟೆಹ್ರಾನ್‌ನಲ್ಲಿರುವ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ಆಯಕಟ್ಟಿನ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ವರದಿಗಳು ತಿಳಿಸಿವೆ. ನಗರದಾದ್ಯಂತ ಸ್ಫೋಟದ ಸೌದ ಕೇಳಿಬಂದಿದೆ.
ಇರಾನ್‌ನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಬಂದ್ ಮಾಡುವ ಬೆದರಿಕೆಗೆ ಸಂಬಂಧಿಸಿದಂತೆ ಅಮೆರಿಕ ನೀಡಿದ್ದ ಗಡುವು ವಿಸ್ತರಣೆಯಾಗಿದ್ದರೂ, ಇಸ್ರೇಲ್ ಮಾತ್ರ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.ಜಾಗತಿಕ ತೈಲ ಪೂರೈಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತಿದ್ದರೂ, ಇಸ್ರೇಲ್‌ನ ಈ ದಿಢೀರ್ ದಾಳಿಯು ಶ್ವೇತಭವನಕ್ಕೂ ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.








