ನವದೆಹಲಿ : ಯುದ್ಧವನ್ನ ಕೊನೆಗೊಳಿಸುವ ಅಮೆರಿಕದ ಪ್ರಸ್ತಾಪವನ್ನ ಇರಾನ್ ತಿರಸ್ಕರಿಸಿದ್ದು, ತನ್ನದೇ ಆದ ಷರತ್ತುಗಳ ಮೇಲೆ “ಯುದ್ಧವನ್ನ ಕೊನೆಗೊಳಿಸುವುದಾಗಿ” ಹೇಳಿದೆ ಎಂದು ವರದಿಯಾಗಿದೆ.
“ಇರಾನ್ ಯುದ್ಧವನ್ನ ಕೊನೆಗೊಳಿಸಲು ನಿರ್ಧರಿಸಿದಾಗ ಮತ್ತು ತನ್ನದೇ ಆದ ಷರತ್ತುಗಳನ್ನ ಪೂರೈಸಿದಾಗ ಅದನ್ನು ಕೊನೆಗೊಳಿಸುತ್ತದೆ” ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದರು. ಇರಾನ್ ಯುಎಸ್ ವಿರುದ್ಧ ತನ್ನ ರಕ್ಷಣೆಯನ್ನ ಮುಂದುವರಿಸಲು ಉದ್ದೇಶಿಸಿದೆ ಮತ್ತು ಅದರ ಷರತ್ತುಗಳು ಈಡೇರುವವರೆಗೆ “ಭಾರೀ ಹೊಡೆತಗಳನ್ನು” ನೀಡುವುದಾಗಿ ಪ್ರತಿಜ್ಞೆ ಮಾಡಿದೆ.
ಹಿಂದೆ ಎರಡು ಬಾರಿ ಮಾತುಕತೆಯ ಸಮಯದಲ್ಲಿ ಅಮೆರಿಕ ಇರಾನ್’ಗೆ ಹೇಗೆ ಮೋಸ ಮಾಡಿತು ಎಂಬುದನ್ನ ಅಧಿಕಾರಿ ಎತ್ತಿ ತೋರಿಸಿದರು ಮತ್ತು ಎರಡೂ ಸಂದರ್ಭಗಳಲ್ಲಿ ವಾಷಿಂಗ್ಟನ್’ಗೆ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಳ್ಳುವ ಯಾವುದೇ ನಿಜವಾದ ಉದ್ದೇಶವಿರಲಿಲ್ಲ ಎಂದು ಹೇಳಿದರು.








