ನವದೆಹಲಿ : ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಜೋರಾಗಿದೆ. ಹೀಗಾಗಿ ಗ್ಯಾಸ್ ಕಂಪನಿಗಳು ಬುಕ್ಕಿಂಗ್ ಹೊಸ ನಿಯಮ ಜಾರಿಗೊಳಿಸಿದೆ. ಸಿಂಗಲ್ ಗ್ಯಾಸ್ ಕನೆಕ್ಷನ್ ಹಾಗೂ ಡಬಲ್ ಕನೆಕ್ಷನ್‌ಗೆ ಬೇರೆ ಬೇರೆ ನಿಯಮಗಳನ್ನು ಜಾರಿತಂದಿದೆ.
ಹೌದು ಇಂದಿನಿಂದ ಗ್ಯಾಸ್ ಬುಕ್ಕಿಂಗ್‌ಗೆ ಹೊಸ ನಿಯಮ ಜಾರಿಯಾಗಿದೆ. ಗಡುವು ಮುಗಿಯುವ ಮೊದಲೇ ಗ್ಯಾಸ್ ಬುಕ್ ಮಾಡಿದ್ರೆ ಅಕೌಂಟ್ ಬ್ಲಾಕ್ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಹೊಸ ನಿಯಮ ಜಾರಿಗೆ ಬಂದಿದೆ. ನಿಗದಿತ ದಿನಗಳ ಗಡುವು ಮುಗಿಯುವ ಮೊದಲೇ ಸಿಲಿಂಡರ್ ಬುಕ್ ಮಾಡಲು ಪ್ರಯತ್ನಿಸಿದರೆ, ಅಂತಹ ಗ್ರಾಹಕರ ಎಲ್‌ಪಿಜಿ ಐಡಿಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗುವುದು. ಸಬ್ಸಿಡಿ ದುರ್ಬಳಕೆ ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸಿಂಗಲ್ ಕನೆಕ್ಷನ್ ನಿಯಮ: ಗ್ಯಾಸ್ ಡೆಲವರಿ ಆದ ದಿನದಿಂದ 25 ದಿನದ ನಂತರ ಗ್ಯಾಸ್ ಬುಕ್ ಮಾಡಬೇಕು. ಈ ಮೊದಲು 21 ದಿನವಿತ್ತು. ಇದೀಗ ಅದನ್ನು 25 ದಿನಕ್ಕೆ ಏರಿಸಿದ್ದಾರೆ.
ಡಬಲ್ ಕನೆಕ್ಷನ್ ನಿಯಮ: ಗ್ಯಾಸ್ ಡೆಲವರಿ ಆದ ದಿನದಿಂದ 35 ದಿನದ ನಂತರ ಗ್ಯಾಸ್ ಬುಕ್ ಮಾಡಬೇಕು.
5 ಕೆಜಿ ಸಿಲಿಂಡರ್: ಗ್ಯಾಸ್ ಡೆಲವರಿ ಆದ ದಿನದಿಂದ 16ಕ್ಕೆ ದಿನಕ್ಕೆ ಬುಕ್ ಮಾಡಬೇಕು. ಈ ಮೊದಲು 9 ದಿನವಿತ್ತು. ಇದೀಗ ಅದನ್ನು 16 ದಿನಕ್ಕೆ ಏರಿಸಿದ್ದಾರೆ.
10 ಕೆಜಿ ಸಿಲಿಂಡರ್: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೊದಲು 18 ದಿನಕ್ಕೆ ಬುಕ್ ಮಾಡಬಹುದಿತ್ತು. ಇದೀಗ ಗ್ಯಾಸ್ ಡೆಲಿವರಿ ಆದ 32ನೇ ದಿನಕ್ಕೆ ಬುಕ್ ಮಾಡಬೇಕು. ಒಂದು ವೇಳೆ ಗಡುವು ಮುಗಿಯೋದಕ್ಕೂ ಮೊದಲು ಗ್ಯಾಸ್ ಬುಕ್ ಮಾಡಿದ್ರೆ ಅಕೌಂಟ್ ಬ್ಲಾಕ್ ಆಗಲಿದೆ. ಹೀಗಾಗಿ ಡೆಲಿವರಿ ಆದ ದಿನದಿಂದ ಗಡುವು ನೀಡಿದ ದಿನ ಮುಕ್ತಾಯದ ನಂತರವೇ ಗ್ಯಾಸ್ ಬುಕ್ ಮಾಡಬೇಕು.








