ನವದೆಹಲಿ : ಇರಾನ್ ಇಸ್ರೇಲ್ ಯುದ್ಧದ ಪರಿಣಾಮ ಇದೀಗ ವಿಮಾನಗಳಿಗೂ ಆ ಒಂದು ಬಿಸಿ ತಟ್ಟಿದ್ದು, ವಿಮಾನಗಳಿಗೂ ತೈಲ ಅಭಾವ ಬಿಸಿ ತಟ್ಟಿದೆ ಹಾಗಾಗಿ ಏಪ್ರಿಲ್ ಒಂದರಿಂದ ವಿಮಾನ ಪ್ರಯಾಣದ ಏರಿಕೆ ಆಗುವ ಸಾಧ್ಯತೆ ಇದೆ. ಹೌದು ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವ ರಾಮ ಮೋಹನ ನಾಯ್ಡು ದರ ಏರಿಕೆ ಕುರಿತು ಇದೀಗ ಸುಳಿವು ನೀಡಿದ್ದಾರೆ.
ವಿಮಾನಯಾನ ಸಂಸ್ಥೆಯ ವೆಚ್ಚದಲ್ಲಿ ಇಂಧನಂದೇ ಪಾಲಾಗಿದ್ದು ಶೇಕಡ 35 ರಿಂದ 45ರಷ್ಟು ಇಂಧನದ್ದೆ ಪಾಲು ಇದೆ ಕೊಲ್ಲಿ ರಾಷ್ಟ್ರಗಳ ಉದ್ವಿಗ್ನತೆಯಿಂದ ಕಚ್ಚಾ ತೈಲಗಳ ಬೆಲೆ ಏರಿಕೆಯಾಗಿದ್ದು ಹಾಗಾಗಿ ವಿಮಾನಯನ ಪ್ರಯಾಣದರ ಏರಿಕೆ ಆಗಲೇ ಬೇಕಾಗುತ್ತದೆ ಎನ್ನುವ ಸುಳಿವು ನೀಡಿದ್ದು ಈಗಾಗಲೇ ಇಂಧನ ಸರ ಚಾರ್ಜ್ ವಿಧಿಸಿರುವ ಕೆಲ ಸಂಸ್ಥೆಗಳು ಏರ್ ಇಂಡಿಯಾ, ಇಂಡಿಗೋ, ಏರ್ ಅಕಾಸ್ ಸಂಸ್ಥೆಗಳು ಸಮಸ್ಯೆಗಳ ಕುರಿತು ವಿವರಿಸಿವೆ.








