ನವದೆಹಲಿ : ವಿಮಾನಯಾನ ಟಿಕೆಟ್ ದರ ಮಿತಿಯನ್ನು ಹಿಂಪಡೆದ ಕೇಂದ್ರ ಸರ್ಕಾರ, ದೇಶೀಯ ವಿಮಾನಯಾನ ಟಿಕೆಟ್ ದರಗಳ ಮೇಲಿನ ತಾತ್ಕಾಲಿಕ ಮಿತಿಯನ್ನು ಇದೀಗ ಕೇಂದ್ರ ಸರ್ಕಾರ ಹಿಂಪಡೆದಿದೆ.
ಆದೇಶ ಹಿಂಪಡೆದ ನಾಗರಿಕ ವಿಮಾನಯಾನ ಸಚಿವಾಲಯ ಟಿಕೆಟ್ ದರ ಮಿತಿ ಹಿಂಪಡೆದ ಆದೇಶ ನಾಳೆಯಿಂದಲೇ ಜಾರಿ ಆಗಲಿದೆ. ಕಳೆದ ವರ್ಷ ಇಂಡಿಗೋ ಏರ್ಲೈನ್ಸ್ನಲ್ಲಿ ಉಂಟಾಗಿತ್ತು. ಪೈಲೆಟ್ ರೋಸ್ಟರಿಂಗ್ ಬಿಕ್ಕಟಿನಿಂದ ವಿಮಾನಗಳು ರದ್ದಾಗಿದ್ದವು. ಇದರಿಂದ ವಿಮಾನ ಪ್ರಯಾಣದ ಟಿಕೆಟ್ ಗಗನಕ್ಕೆ ಏರಿತು. ಪ್ರಯಾಣಿಕರ ದೃಷ್ಟಿಯಿಂದ ಟಿಕೆಟ್ ದರದ ಮೇಲೆ ಮಿತಿ ವಿಧಿಸಿತ್ತು.
ಸರ್ಕಾರ ವಿಮಾನಗಳ ಟಿಕೆಟ್ ದರದ ಮೇಲೆ ಗರಿಷ್ಠ ಮಿತಿ ವಿಧಿಸಿತ್ತು ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ, ಆದೇಶವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ದರ ಮಿತಿ ಆದೇಶ ಹಿಂಪಡೆದರು ಕೂಡ ಮನಬಂದಂತೆ ವಿಮಾನಯನ ಸಂಸ್ಥೆಗಳು ದರ ಹೆಚ್ಚಿಸಬಾರದು, ದರ ಏರಿಕೆ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರಯಾಣಿಕರಿಗೆ ಸಮಸ್ಯೆ ಆಗುವಂತೆ ದರ ಏರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ:
ಮಿತಿ ತೆರವಿಗೆ ಕಾರಣ: 2025ರ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನ ಸಂಸ್ಥೆಯ ಬಿಕ್ಕಟ್ಟಿನ ಸಮಯದಲ್ಲಿ ಪ್ರಯಾಣಿಕರನ್ನು ಅತಿಯಾದ ದರ ಏರಿಕೆಯಿಂದ ರಕ್ಷಿಸಲು ಸರ್ಕಾರವು 18,000 ರೂ. ಗಳ ಗರಿಷ್ಠ ಮಿತಿಯನ್ನು ಹೇರಿತ್ತು. ಈಗ ವಿಮಾನಯಾನ ಸಂಸ್ಥೆಗಳ ಕಾರ್ಯಚರಣೆ ಸಹಜ ಸ್ಥಿತಿಗೆ ಮರಳಿರುವುದರಿಂದ ಈ ಮಿತಿಯನ್ನು ಹಿಂಪಡೆಯಲಾಗಿದೆ.
ದರ ಏರಿಕೆಯ ಆತಂಕ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಇಂಧನ (ATF) ದರ ಗಗನಕ್ಕೇರಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ನಷ್ಟವನ್ನು ಸರಿದೂಗಿಸಲು ಟಿಕೆಟ್ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಸರ್ಕಾರದ ಎಚ್ಚರಿಕೆ: ದರ ಮಿತಿಯನ್ನು ತೆಗೆದುಹಾಕಿದರೂ, ಹಬ್ಬಗಳು ಅಥವಾ ತುರ್ತು ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಅನಗತ್ಯವಾಗಿ ಮತ್ತು ಅತಿಯಾಗಿ ದರ ಏರಿಕೆ ಮಾಡಬಾರದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಎಚ್ಚರಿಸಿದೆ. ಒಂದು ವೇಳೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾದಲ್ಲಿ ಸರ್ಕಾರ ಮತ್ತೆ ಮಧ್ಯಪ್ರವೇಶಿಸುವ ಹಕ್ಕನ್ನು ಕಾಯ್ದಿರಿಸಿದೆ.








