Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೈ ಎಲೆಕ್ಷನ್ : ಉಮೇಶ್ ಮೇಟಿ, ಸಮರ್ಥ್ ಶಾಮನೂರಗೆ ಟಿಕೆಟ್ ಫಿಕ್ಸ್? : ಅಧಿಕೃತ ಘೋಷಣೆಯೊಂದೆ ಬಾಕಿ!

22/03/2026 5:32 AM

BREAKING : ರಾಜ್ಯಗಳಿಗೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಹಂಚಿಕೆ ಶೇ.50ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ

22/03/2026 5:31 AM

‘ವಿಂಬಲ್ಡನ್’ ಇತಿಹಾಸದಲ್ಲೇ ಮೊದಲು: ತೀರ್ಪುಗಳಲ್ಲಿನ ಗೊಂದಲ ನಿವಾರಣೆಗೆ ಬರಲಿದೆ ‘ವಿಡಿಯೋ ರಿವ್ಯೂ’ ತಂತ್ರಜ್ಞಾನ!

22/03/2026 5:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯಗಳಿಗೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಹಂಚಿಕೆ ಶೇ.50ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ
INDIA

BREAKING : ರಾಜ್ಯಗಳಿಗೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಹಂಚಿಕೆ ಶೇ.50ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ

By kannadanewsnow0522/03/2026 5:31 AM

ನವದೆಹಲಿ : ದೇಶದಲ್ಲಿ ಆಹಾರೋದ್ಯಮಕ್ಕೆ ದೊಡ್ಡಮಟ್ಟದ ಪೆಟ್ಟು ನೀಡಿರುವುದಲ್ಲದೆ, ಜನಸಾಮಾನ್ಯರ ಅಡುಗೆ ಮನೆವರೆಗೂ ವ್ಯಾಪಿಸಿರುವ ಮಧ್ಯಪ್ರಾಚ್ಯ ಯುದ್ಧದ ಅಡ್ಡಪರಿಣಾಮ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಲಕ್ಷಣಗಳು ಗೋಚರಿಸಿವೆ. ಇಂಧನ ಪೂರೈಕೆಯಲ್ಲಿ ಉಂಟಾಗಿದ್ದ ವ್ಯತ್ಯಯದಿಂದ ಕಂಗಾಲಾಗಿರುವ ಕಮರ್ಷಿಯಲ್ ಎಲ್‌ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಶನಿವಾರ ತುಸು ನಿರಾಳತೆ ನೀಡಿದೆ.

ದೇಶೀಯ ಉತ್ಪಾದನೆ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಬಳಕೆಯ ಹಂಚಿಕೆಯನ್ನು ಕೇಂದ್ರ ಸರ್ಕಾರ ಶೇ. 20ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಒಟ್ಟು ಹಂಚಿಕೆ ಪ್ರಮಾಣ ಇದೀಗ ಶೇ. 50ಕ್ಕೆ ತಲುಪಿದೆ. ಹೀಗಾಗಿ ಈಗಾಗಲೇ ಬಂದ್ ಆಗಿರುವ ಹೋಟೆಲ್‌ಗಳು, ಕೈಗಾರಿಕೆ ಘಟಕಗಳಿಗೆ ತುಸು ನಿರಾಳತೆ ಸಿಗಲಿದ್ದು, ಹಂತ ಹಂತವಾಗಿ ಇವು ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.

ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ಯುದ್ಧ ಕೊಲ್ಲಿ ರಾಷ್ಟ್ರಗಳಿಗೂ ವ್ಯಾಪಿಸಿದ್ದರಿಂದ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡುವ ಸಲುವಾಗಿ ಹೋಟೆಲ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ನಂತರ ಪರಿಸ್ಥಿತಿ ತುಸು ಸುಧಾರಿಸಿದಾಗ ಶೇ. 20ರಷ್ಟು ಪೂರೈಕೆಯನ್ನು ಮರುಸ್ಥಾಪಿಸಲಾಗಿತ್ತು. ಜೊತೆಗೆ ಪೈಪ್ ಗ್ಯಾಸ್ (ಪಿಎನ್‌ಜಿ) ಯೋಜನೆಗಳನ್ನು ತ್ವರಿತಗೊಳಿಸುವ ಷರತ್ತಿನ ಮೇಲೆ ಶೇ. 10ರಷ್ಟು ಹೆಚ್ಚುವರಿ ಹಂಚಿಕೆ ಮಾಡಲಾಗಿತ್ತು. ಶನಿವಾರ ಮತ್ತೆ ಶೇ. 20ರಷ್ಟು ಹೆಚ್ಚುವರಿ ಹಂಚಿಕೆಯನ್ನು ಸರ್ಕಾರ ಪ್ರಕಟಿಸಿದೆ.

ಸುದ್ದಿಯ ಪ್ರಮುಖ ಅಂಶಗಳು:

ಹೆಚ್ಚುವರಿ ಪೂರೈಕೆ: ಈ ಹೊಸ ಆದೇಶದ ಪ್ರಕಾರ, ಹೋಟೆಲ್‌ಗಳು ಮತ್ತು ಡಾಬಾಗಳು ತಮ್ಮ ಈಗಿನ ನಿಗದಿತ ಮಿತಿಗಿಂತ ಶೇ. 20ರಷ್ಟು ಹೆಚ್ಚು ವಾಣಿಜ್ಯ ಸಿಲಿಂಡರ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಯಾರಿಗೆ ಲಾಭ?: ಮುಖ್ಯವಾಗಿ ರಸ್ತೆ ಬದಿಯ ಡಾಬಾಗಳು, ಸಣ್ಣ ರೆಸ್ಟೋರೆಂಟ್‌ಗಳು, ಶಾಲಾ-ಕಾಲೇಜು ಮತ್ತು ಕಚೇರಿಗಳ ಕ್ಯಾಂಟೀನ್‌ಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಕೊರತೆ ನೀಗಿಸುವ ಪ್ರಯತ್ನ: ಇತ್ತೀಚಿನ ದಿನಗಳಲ್ಲಿ ಕೆಲವು ಭಾಗಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹಬ್ಬದ ಸೀಸನ್ ಅಥವಾ ವಿಶೇಷ ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಾದಾಗ ಉಂಟಾಗುವ ಬಿಕ್ಕಟ್ಟನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕಪ್ಪು ಮಾರುಕಟ್ಟೆಗೆ ಬ್ರೇಕ್: ವಾಣಿಜ್ಯ ಸಿಲಿಂಡರ್‌ಗಳ ಅಧಿಕೃತ ಪೂರೈಕೆ ಹೆಚ್ಚಾಗುವುದರಿಂದ, ಗೃಹ ಬಳಕೆಯ ಸಿಲಿಂಡರ್‌ಗಳನ್ನು (Domestic LPG) ವಾಣಿಜ್ಯ ಉದ್ದೇಶಕ್ಕೆ ಅಕ್ರಮವಾಗಿ ಬಳಸುವುದನ್ನು ತಡೆಯಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

Share. Facebook Twitter LinkedIn WhatsApp Email

Related Posts

‘ವಿಂಬಲ್ಡನ್’ ಇತಿಹಾಸದಲ್ಲೇ ಮೊದಲು: ತೀರ್ಪುಗಳಲ್ಲಿನ ಗೊಂದಲ ನಿವಾರಣೆಗೆ ಬರಲಿದೆ ‘ವಿಡಿಯೋ ರಿವ್ಯೂ’ ತಂತ್ರಜ್ಞಾನ!

22/03/2026 5:30 AM1 Min Read

ತಪ್ಪು ನಂಬರ್‌ಗೆ UPI ಹಣ ಕಳುಹಿಸಿದ್ದೀರಾ? ಚಿಂತಿಸಬೇಡಿ, ಈ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ಹಣ ಮರಳಿ ಪಡೆಯಿರಿ!

22/03/2026 5:20 AM1 Min Read

ಅತಿ-ಸಂಸ್ಕರಿಸಿದ ಆಹಾರ ತಿನ್ನುವುದ್ರಿಂದ ‘ಪಾರ್ಶ್ವವಾಯು’ ಅಪಾಯವು ಶೇ.67ರಷ್ಟು ಹೆಚ್ಚಾಗುತ್ತದೆ ; ಹೊಸ ಅಧ್ಯಯನ

22/03/2026 5:16 AM1 Min Read
Recent News

BREAKING : ಬೈ ಎಲೆಕ್ಷನ್ : ಉಮೇಶ್ ಮೇಟಿ, ಸಮರ್ಥ್ ಶಾಮನೂರಗೆ ಟಿಕೆಟ್ ಫಿಕ್ಸ್? : ಅಧಿಕೃತ ಘೋಷಣೆಯೊಂದೆ ಬಾಕಿ!

22/03/2026 5:32 AM

BREAKING : ರಾಜ್ಯಗಳಿಗೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಹಂಚಿಕೆ ಶೇ.50ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ

22/03/2026 5:31 AM

‘ವಿಂಬಲ್ಡನ್’ ಇತಿಹಾಸದಲ್ಲೇ ಮೊದಲು: ತೀರ್ಪುಗಳಲ್ಲಿನ ಗೊಂದಲ ನಿವಾರಣೆಗೆ ಬರಲಿದೆ ‘ವಿಡಿಯೋ ರಿವ್ಯೂ’ ತಂತ್ರಜ್ಞಾನ!

22/03/2026 5:30 AM

ಪ್ರೀತಿಯ ಸ್ಥಾನವನ್ನು ತುಂಬಬಲ್ಲದೇ ಎಐ (AI) ಸಂಗಾತಿ?: ಇಲ್ಲಿದೆ ಮಾನಸಿಕ ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆ

22/03/2026 5:30 AM
State News
KARNATAKA

BREAKING : ಬೈ ಎಲೆಕ್ಷನ್ : ಉಮೇಶ್ ಮೇಟಿ, ಸಮರ್ಥ್ ಶಾಮನೂರಗೆ ಟಿಕೆಟ್ ಫಿಕ್ಸ್? : ಅಧಿಕೃತ ಘೋಷಣೆಯೊಂದೆ ಬಾಕಿ!

By kannadanewsnow0522/03/2026 5:32 AM KARNATAKA 1 Min Read

ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಜಟಾಪಟಿ ನಡೆಯುತ್ತಿದ್ದು,…

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

22/03/2026 5:24 AM

BIG NEWS : 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಗಣತಿಯಿಂದ ವಿನಾಯ್ತಿ ಇಲ್ಲ : ರಾಜ್ಯ ಸರ್ಕಾರ ಸ್ಪಷ್ಟನೆ

22/03/2026 5:14 AM

ಬಗೆಹರಿದ ದಾವಣಗೆರೆ ಬೈಎಲೆಕ್ಷನ್ ಟಿಕೆಟ್ ಗೊಂದಲ: ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಫಿಕ್ಸ್

22/03/2026 5:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.