ಶಿವಮೊಗ್ಗ: ಚಂಡೀಗಢ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಸಾಗರದ ತಾಲ್ಲೂಕಿನ ಶಿಕ್ಷಕಿಯರಾದಂತ ಶೈಲಜಾ ಮತ್ತು ಜಯಮ್ಮ ಎಂ.ಬಿ ದ್ವಿತೀಯ ಸ್ಥಾನ ಪಡೆದು ಮಹತ್ತರ ಸಾಧನೆ ಮಾಡಿದ್ದಾರೆ. ಈ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸಾಗರದ ಪ್ರತಿಭೆಗಳು ಮಿಂಚಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಾಧಕಿಯರಾದ ಶೈಲಜಾ ಮತ್ತು ಜಯಮ್ಮ ಅವರ ಈ ಸಾಧನೆಯನ್ನು ಶ್ಲಾಘಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಾಗರ ಶಾಖೆಯ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು ಮತ್ತು ಎಲ್ಲಾ ನಿರ್ದೇಶಕರು ಇವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾಗರದಂತಹ ಚಿಕ್ಕ ಊರಿನಿಂದ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ, ಅಲ್ಲಿ ದ್ವಿತೀಯ ಸ್ಥಾನ ಗಳಿಸುವುದು ಸಾಮಾನ್ಯ ಸಾಧನೆಯಲ್ಲ. ಇವರು ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್ ಗೌತಮಪುರ ತಿಳಿಸಿದ್ದಾರೆ. ಅಲ್ಲದೇ ಸಾಧಕಿಯರ ಮುಂದಿನ ಯೋಗ ಪಯಣಕ್ಕೆ ಸಾಗರ ತಾಲ್ಲೂಕು ಸಮಸ್ತ ಸರ್ಕಾರಿ ನೌಕರರ ಪರವಾಗಿ ಶುಭ ಹಾರೈಸಿದ್ದಾರೆ.
ಅಪ್ತಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ: ಭಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್







