ದಕ್ಷಿಣಕನ್ನಡ : ಮಹೇಶ್ ಶೆಟ್ಟಿ ತಿಮರೊಡಿಗೆ ಇದೀಗ ಮೂರನೇ ಭಾರಿ ಗಡಿಪಾರು ಆದೇಶ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಸ್ಪಿ ಸ್ಟೇಲ್ಲಾ ವರ್ಗಿಸ್ ಮೂರನೇ ಬಾರಿ ಗಡಿಪಾರಿಗೆ ಆದೇಶ ಹೊರಡಿಸಿದ್ದಾರೆ. ತಿಮರೋಡಿ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿಗೆ ಗಡಿಪಾರು ಮಾಡುವಂತೆ ಆದೇಶಿಸಿದ್ದಾರೆ.
ಸೆಪ್ಟೆಂಬರ್ 16ರ ವರೆಗೆ ತಿಮರೊಡಿಗೆ ಗಡಿಪಾರು ಆದೇಶ ವಿಧಿಸಲಾಗಿದೆ. ನಿನ್ನೆ ರಾತ್ರಿ ತಿಮರೋಡಿ ಮನೆಗೆ ಡಿವೈಎಸ್ಪಿ ರೋಹಿಣಿ ನೋಟಿಸ್ ಅಂಟಿಸಿದ್ದಾರೆ. ನೋಟಿಸ್ ನೀಡುವ ವೇಳೆ ಮನೆಯಲ್ಲಿ ಇರಲಿಲ್ಲ. ತಿಮರೊಡಿ ಮನೆಯ ಗೋಡೆಗೆ ಪೊಲೀಸರು ನೋಟಿಸ್ ಅಂಟಿಸಿ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ತಿಮರೊಡಿ ಮನೆ ಇದೆ.








