ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 13ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಒಟ್ಟು 27 ವಿಷಯಗಳ ಮಾದರಿ ಉತ್ತರಗಳನ್ನು (Model Answers) ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.
ಮಾ. 13ರವರೆಗೆ ನಡೆದ ಪರೀಕ್ಷೆಗಳ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಇಂದು (ಮಾರ್ಚ್ 16) ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಮಂಡಳಿಯು ಕಾಲಾವಕಾಶ ನೀಡಿದೆ.
ಬಾಕಿ ಪರೀಕ್ಷೆಗಳು: ಸದ್ಯ ಪರೀಕ್ಷೆಗಳು ಮುಂದುವರಿಯುತ್ತಿದ್ದು, ಮಾರ್ಚ್ 17ರವರೆಗೆ ಉಳಿದ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ಮುಂದಿನ ಪ್ರಕಟಣೆ: ಮಾರ್ಚ್ 14ರಿಂದ 17ರವರೆಗೆ ನಡೆಯುವ ಪರೀಕ್ಷೆಗಳ ಮಾದರಿ ಉತ್ತರಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಪರೀಕ್ಷೆಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಲು ಮಾರ್ಚ್ 19ರವರೆಗೆ ಅವಕಾಶವಿರುತ್ತದೆ.
ಆಕ್ಷೇಪಣೆ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ಅಥವಾ ಪೋಷಕರು ಪೂರಕ ದಾಖಲೆಗಳೊಂದಿಗೆ ಮಂಡಳಿಯ ಅಧಿಕೃತ ವೆಬ್ಸೈಟ್ http://kseab.karnataka.gov.in/ ಮೂಲಕ ಆನ್ಲೈನ್ನಲ್ಲಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಬಹುದು.








