Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM

ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದೂರ

15/03/2026 6:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ
KARNATAKA

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

By kannadanewsnow0915/03/2026 6:07 PM

ಬೆಂಗಳೂರು: ವಿಶ್ವ ಕಿಡ್ನಿ ದಿನದ ಅಂಗವಾಗಿ ಭಾನುವಾರ ಬೆಳಿಗ್ಗೆ ಸ್ಪರ್ಶ್ ಆಸ್ಪತ್ರೆ, ಆರ್‌ಆರ್ ನಗರ ಶಾಖೆಯು “ಆರೋಗ್ಯಕರ ಕಿಡ್ನಿಗಾಗಿ ಓಟ” ಆಯೋಜಿಸಿತ್ತು. 5 ಕಿಲೋಮೀಟರ್ ಓಟದಲ್ಲಿ 7000 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಮೂತ್ರಪಿಂಡದ ಆರೋಗ್ಯ ಮತ್ತು ಮೂತ್ರಪಿಂಡ ರೋಗಗಳನ್ನು ತಡೆಗಟ್ಟುವ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ತಜ್ಞ ವೈದ್ಯರೂ ಸೇರಿದಂತೆ ಆರೋಗ್ಯ ಕ್ಷೇತ್ರದ ವೃತ್ತಿಪರರು, ಫಿಟ್‌ನೆಸ್ ಉತ್ಸಾಹಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಕ್ರೀಡಾಪಟುಗಳು ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಕಾಳಜಿ ಮತ್ತು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ಬದ್ಧತೆಗೆ ಸಾಕ್ಷಿಯೆಂಬಂತೆ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಿಡ್ನಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.

ಜಡ ಜೀವನಶೈಲಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯತೆಯು ಭಾರತದಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಸ್ವಯಂ ಅರಿವು, ಜಾಗೃತಿ ಮತ್ತು ಆರಂಭಿಕ ತಡೆಗಟ್ಟುವಿಕೆ ಬಹಳ ನಿರ್ಣಾಯಕವಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಲಾಯಿತು.

ಕಿಡ್ನಿ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಅಧ್ಯಕ್ಷ ಮತ್ತು ಮುಖ್ಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶರಣ್‌ ಶಿವರಾಜ್ ಪಾಟೀಲ್, “ಭಾರತವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲದ ರೋಗಗಳನ್ನು ಎದುರಿಸುತ್ತಿದೆ, ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಹೆಚ್ಚಿನ ಜಾಗೃತಿ, ಆರಂಭದಲ್ಲೇ ಪತ್ತೆ ಹಚ್ಚುವುದು, ಇಂತಹ ಜಾಗೃತಿ ಜಾಥಾಗಳಿಂದ ಸಮುದಾಯದ ಸಮಗ್ರ ಪ್ರಯತ್ನವು ನಾಗರಿಕರಲ್ಲಿ ತಿಳುವಳಿಕೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಸಲಹೆಗಾರರು ಮೂತ್ರ ಪಿಂಡ ಕಾಯಿಲೆಗಳನ್ನು ತಡೆಗಟ್ಟುವ ಮತ್ತು ಮೂತ್ರಪಿಂಡದ ಆರೈಕೆಯ ಕುರಿತಾಗಿ ವಿವರಗಳನ್ನೊದಗಿಸಿದರು. ನೆಫ್ರಾಲಜಿ ವಿಭಾಗದ ತಜ್ಞರು, ಸಮಾಲೋಚಕರಾದ ಡಾ. ಸುನಿಲ್ ಆರ್, ಡಾ. ಭವ್ಯಾ ಆರ್, ಡಾ. ಸಂತೋಷ್ ಎಸ್, ಮತ್ತು ಯೂರಾಲಜಿ ವಿಭಾಗದ ಡಾ. ಶರತ್ ಸಿ.ಟಿ. ಮೊದಲಾದವರು ಓಟದಲ್ಲಿ ಪಾಲ್ಗೊಂಡವರೊಂದಿಗೆ ಸಂವಾದ ನಡೆಸಿ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ, ದೇಹದಲ್ಲಿ ನೀರಿನ ಅಂಶದ ಸಮತೋಲನ ಕಾಪಾಡಿಕೊಳ್ಳುವುದು, ಸಮತೋಲಿತ ಪ್ರಮಾಣದ ಪೌಷ್ಠಿಕಾಂಶಗಳ ಸೇವನೆ, ನಿಯಮಿತ ವ್ಯಾಯಾಮ ಮತ್ತು ವೈದ್ಯಕೀಯ ತಪಾಸಣೆಗಳ ಮಹತ್ವವನ್ನು ಕುರಿತು ವಿವರಿಸಿದರು.

ಸ್ಪರ್ಶ್ ಆಸ್ಪತ್ರೆ, ಆರ್.ಆರ್.ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ.ಸಂದೀಪ್ ಆರ್.ಎಂ ಮಾತನಾಡಿ “ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುವಲ್ಲಿ ನಿಯಮಿತ ದೈಹಿಕ ಚಟುವಟಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಓಟದಂತಹ ಚಟುವಟಿಕೆಗಳು ಹೃದಯರಕ್ತನಾಳದ ಕ್ಷಮತೆಯನ್ನು ಸುಧಾರಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ತೂಕ ನಿರ್ವಹಣೆಯನ್ನು ಬೆಂಬಲಿಸುತ್ತದೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ, ವ್ಯಾಯಾಮವು ಹೃದಯರಕ್ತನಾಳದ ಆರೋಗ್ಯವನ್ನು ಬಲಪಡಿಸುತ್ತದೆ, ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಸಮತೋಲನವನ್ನು ಬೆಂಬಲಿಸುತ್ತದೆ, ಇವೆಲ್ಲವೂ ಮೂತ್ರಪಿಂಡದ ಕಾರ್ಯನಿರ್ವಹಣೆಗೆ ನಿಕಟ ಸಂಬಂಧ ಹೊಂದಿದೆ ಎಂದರು.

ಈ ನಿಟ್ಟಿನಲ್ಲಿ ಸಮುದಾಯವನ್ನು ಒಟ್ಟುಗೂಡಿಸಿ ಜಾಗೃತಿ ಮೂಡಿಸುವ ಮೂಲಕ, ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳೊಂದಿಗೆ ಮೂತ್ರಪಿಂಡದ ಕಾಯಿಲೆಯನ್ನು ತಡೆಗಟ್ಟುವಲ್ಲಿ ಮತ್ತು ದೀರ್ಘಕಾಲೀನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬ ಸಂದೇಶವನ್ನು ಈ ಅಭಿಯಾನದದ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆಲ್ಕೆಮ್, ಆಂಥೆಮ್ ಬಯೋಫಾರ್ಮಾ, ನೆಫ್ರೋಪ್ಲಸ್, ಆಡ್ಲೇ ಆಂಕೊಲಾಜಿ, ಕ್ರಾಸಾಥ್ಲಾನ್, ಆರ್‌ಆರ್ ನಗರ ರನ್‌ಅಡಿಕ್ಟ್ಸ್‌, ಹಾಗೂ ಮತ್ತು ಆಚಾರ್ಯ ಯೋಗ ಯೂತ್ ಕ್ಲಬ್ ಸೇರಿದಂತೆ ಪಾಲುದಾರರ ಸಹಯೋಗದೊಂದಿಗೆ 5 ಕಿಮೀ ಓಟವು ಆರ್‌ಆರ್‌ನಗರದ ಸುತ್ತಲಿನ ಪ್ರದೇಶಗಳ ಮೂಲಕ ಸಾಗಿ ಜಾಗೃತಿ ಜೊತೆಗೆ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಕುರಿತು ಸಂದೇಶ ನೀಡಿತು.

Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM1 Min Read

ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದೂರ

15/03/2026 6:04 PM4 Mins Read

ಸಾಗರ ಮಾರಿ ಸಮಿತಿ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆದ್ದ ‘ಪುರುಷೋತ್ತಮ್’ಗೆ ಅಧ್ಯಕ್ಷ ಪಟ್ಟ?

15/03/2026 5:49 PM2 Mins Read
Recent News

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM

ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದೂರ

15/03/2026 6:04 PM

ಸಾಗರ ಮಾರಿ ಸಮಿತಿ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆದ್ದ ‘ಪುರುಷೋತ್ತಮ್’ಗೆ ಅಧ್ಯಕ್ಷ ಪಟ್ಟ?

15/03/2026 5:49 PM
State News
KARNATAKA

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

By kannadanewsnow0915/03/2026 6:15 PM KARNATAKA 1 Min Read

ಬೆಂಗಳೂರು: ರಾಜಧಾನಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಸಿಲಿಂಡರ್‌ಗಳಿಲ್ಲದೆ ಹೋಟೆಲ್‌ಗಳು ಬಾಗಿಲು…

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM

ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದೂರ

15/03/2026 6:04 PM

ಸಾಗರ ಮಾರಿ ಸಮಿತಿ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆದ್ದ ‘ಪುರುಷೋತ್ತಮ್’ಗೆ ಅಧ್ಯಕ್ಷ ಪಟ್ಟ?

15/03/2026 5:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.