ಬೆಂಗಳೂರು : ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ಗೆ ಬೇಡಿಕೆ ವಿಪರೀತವಾಗುತ್ತಿದೆ. ಇದೇ ವೇಳೆ, ಇಂಡಿಯನ್ ಆಯಿಲ್ನ ಒನ್ ಆ್ಯಪ್ ಭಾರೀ ಪ್ರಮಾಣದಲ್ಲಿ ಡೌನ್ಲೋಡ್ ಆಗುತ್ತಿದೆ. ಪ್ಲೇಸ್ಟೋರ್‌ನಲ್ಲಿ ಚ್ಯಾಟ್ಜಿಪಿಟಿಯಂತಹ ಆ್ಯಪ್ಗಳನ್ನು ಮೀರಿಸಿ ಒನ್ ಆ್ಯಪ್ ನಂಬರ್ ಸ್ಥಾನದಲ್ಲಿದೆ.
ಹೌದು ಪ್ಲೇಸ್ಟೋರ್‌ನಲ್ಲಿ ಇಂಡಿಯನ್ ಆಯಿಲ್ನ ಒನ್ ಆ್ಯಪ್ ನಂಬರ್ ಒನ್ ಎನಿಸಿದೆ. ಚ್ಯಾಟ್ಜಿಪಿಟಿ ಇತ್ಯಾದಿ ಸ್ಟಾರ್ ಆ್ಯಪ್ಗಳನ್ನು ಇದು ಹಿಂದಿಕ್ಕಿದೆ.ಒನ್ ಆ್ಯಪ್ನಲ್ಲಿ ಇಂಡೇನ್ ಗ್ರಾಹಕರು ಎಲ್ಪಿಜಿ ಬುಕಿಂಗ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಬಹುದು.
ಹೊಸ ಎಲ್ಪಿಜಿ ಕನೆಕ್ಷನ್, ಏಜೆನ್ಸಿ ಬದಲಾವಣೆ, ಗ್ಯಾಸ್ ಬುಕಿಂಗ್ ಇತ್ಯಾದಿ ಕೆಲಸಗಳನ್ನು ಈ ಒನ್ ಆ್ಯಪ್ನಲ್ಲಿ ಮಾಡಲು ಅವಕಾಶ ಇರುತ್ತದೆ.ಚ್ಯಾಟ್ಜಿಪಿ, ಸ್ಟೋರಿ ಟಿವಿ, ಫ್ರೀರೀಲ್ಸ್, ಮೀಶೋ, ಫ್ಲಿಪ್‌ಕಾರ್ಟ್, ಜಿಯೋಹಾಟ್ಸ್ಟಾರ್ ಇತ್ಯಾದಿ ಆ್ಯಪ್ಗಳನ್ನು ಮೀರಿಸಿ, ಇಂಡಿಯನ್ ಆಯಿಲ್ ಒನ್ ಆ್ಯಪ್ ಅತಿಹೆಚ್ಚು ಡೌನ್ಲೋಡ್ ಆದ ಆ್ಯಪ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
imagine being on the tech team at indian oil today.
that's an app to book LPG cylinders and it has crossed chatgpt in rankings. pic.twitter.com/srAH3KrOBq
— Jai Pandya (@jaipandya) March 14, 2026








