ವಿಜಯನಗರ : ವಿಜಯನಗರದ ಕೊಟ್ಟೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಲ್ಕು ಮಂದಿಗೆ ಕಚ್ಚಿ ಬೀದಿ ನಾಯಿ ಗಂಭೀರವಾಗಿ ಗಾಯಗೊಳಿಸಿದೆ. ಮೂವರು ಮಕ್ಕಳ ಸೇರಿದಂತೆ ಓರ್ವ ವ್ಯಕ್ತಿಗೆ ಬಿರಿ ನಾಯಿ ಕಚ್ಚಿ ಗಾಯಗೊಳಿಸಿದೆ.
ಬೀದಿ ನಾಯಿಗಳ ದಾಳಿಗೆ ಇದೀಗ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಈ ಒಂದು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನೆಯ ಎದುರುಗಡೆ ಕುಳಿತಿದ್ದ ಮಗುವಿನ ಮೇಲೆ ಆ ಕಡೆಯಿಂದ ಬಂದಂತಹ ನಾಯಿ ಏಕಾಏಕಿ ದಾಳಿ ಮಾಡಿ ಕೈ ಮತ್ತು ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ ಕುತ್ತಿಗೆ ಭಾಗಕ್ಕೂ ಕಚ್ಚಿ ಗಾಯಗೊಳಿಸಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ.








