ನವದೆಹಲಿ : ಇರಾನ್ ಮೇಲೆ ಅಮೆರಿಕಾ ಅತಿದೊಡ್ಡ ದಾಳಿ ನಡೆಸಿದೆ. ದಾಳಿ ಬಳಿಕ ಟ್ವೀಟ್ ಮೂಲಕ ಇರಾನ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕೆಲವೇ ಸಮಯದ ಹಿಂದೆ ಶಕ್ತಿಶಾಲಿ ಬಾಂಬ್ ದಾಳಿ ನಡೆಸಿದೆ. ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಬಾಂಬ್ ದಾಳಿ ನಡೆಸಿದೆ ಇದು ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯಾಗಿದೆ. ಇರಾನಿನ ಕಿರೀಟ ಪ್ರಾಯವಾದ ಖಾರ್ಗ ದ್ವೀಪದ ಮೇಲೆ ದಾಳಿ ನಡೆಸಿದ. ದ್ವೀಪದಲ್ಲಿರುವ ಪ್ರತಿಯೊಂದು ಮಿಲಿಟರಿ ಕೇಂದ್ರವನ್ನು ಸರ್ವನಾಶ ಮಾಡಿದ್ದೇವೆ. ಹಾಗಾಗಿ ಇರಾನ್ ತಮ್ಮ ಅಳಿಯುಳಿದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಕೊನೆ ಎಚ್ಚರಿಕೆ ನೀಡಿದ್ದಾರೆ.
ಸ್ವಲ್ಪ ಸಮಯದ ಹಿಂದೆ ನನ್ನ ನಿರ್ದೇಶನದಂತೆ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿಗಳಲ್ಲಿ ಒಂದನ್ನು ನಡೆಸಿದೆ ಇರಾನ್ನ ಕಿರೀಟ ಪ್ರಾಯವಾದ ಖಾರ್ಗ ದ್ವೀಪದಲ್ಲಿರುವ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ದ್ವಂಸಗೊಳಿಸಿದೆ ನಮ್ಮ ಶಸ್ತ್ರಾಸ್ತ್ರಗಳು ಜಗತ್ತು ಇರುವವರೆಗೂ ಕಂಡಿರದ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿಕ ಅಸ್ತ್ರಗಳಾಗಿವೆ. ಸೌಜನ್ಯಕ್ಕಾಗಿ ನಾನು ದೀಪದಲ್ಲಿರುವ ತೈಲ ಮೂಲ ಸೌಕರ್ಯಗಳನ್ನ ನಾಶಪಡಿಸಿದಿರಲು ನಿರ್ಧರಿಸಿದ್ದೇನೆ.
ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದರೆ ನಾನು ತಕ್ಷಣವೇ ಈ ನಿರ್ಧಾರವನ್ನು ಮರು ಪರಿಶೀಲಿಸುತ್ತೇನೆ ನನ್ನ ಮೊದಲ ಅವಧಿಯಲ್ಲಿ ಮತ್ತು ಈಗಲೂ ಸಹ ನಾನು ನಮ್ಮ ಮಿಲಿಟರಿಯನ್ನು ಜಗತ್ತಿನಲ್ಲಿ ಅತ್ಯಂತ ಮಾರಕ ಮತ್ತು ಶಕ್ತಿಶಾಲಿ ಪರಿಣಾಮಕಾರಿ ಪಡೆಯನ್ನಾಗಿ ಪುನರ ನಿರ್ಮಿಸಿದ್ದೇನೆ. ನಾವು ದಾಳಿ ಮಾಡಲು ಬಯಸುವ ಯಾವುದನ್ನೇ ಆಗಲಿ ರಕ್ಷಿಸಿಕೊಳ್ಳುವ ಸಾಮರ್ಥ್ಯ ಇರಾನ್ ಬಳಿ ಇಲ್ಲ.
ಈ ಬಗ್ಗೆ ಅವರು ಏನನ್ನು ಮಾಡಲು ಸಾಧ್ಯವಿಲ್ಲ ಎಂದಿಗೂ ಪರಮಾಣು ಆಯುಧವನ್ನು ಹೊಂದುವುದಿಲ್ಲ ಅಥವಾ ಯುಎಸ್ಎ ಮಧ್ಯಪ್ರಾಚ್ಯ ಅಥವಾ ಈ ಜಗತ್ತಿಗೆ ಬೆದರಿಕೆ ಹಾಕುವ ಸಾಮರ್ಥ್ಯವನ್ನು ಪಡೆಯುವುದಿಲ್ಲ ದೇಶವನ್ನಾದರೂ ಉಳಿಸಿಕೊಳ್ಳುವುದು ಬುದ್ಧಿವಂತಿಕೆಯ ಕೆಲಸ ಈ ವಿಷಯ ನಿಮ್ಮ ಗಮನಕ್ಕೆ ಧನ್ಯವಾದಗಳು ಎಂದು ಟ್ರಂಪ್ ವಾರ್ನಿಂಗ್ ಕೊಟ್ಟಿದ್ದರೆ.







