ಕೋಲಾರ : ಕಲ್ಲು ಕ್ವಾರಿಯಲ್ಲಿ ಸ್ಫೋಟದಿಂದ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಮಾರಿಕುಪ್ಪಂ ಬಳಿ ನಡೆದಿದೆ. ತಮಿಳುನಾಡು ಮೂಲದ ಮಾರಿ, ಗೋವಿಂದ ಹಾಗೂ ಮುನಿಯಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯಿಂದ ಎಂಟು ಜನ ಕಾರ್ಮಿಕರು ಕೋಲಾರದ ಕೆಜಿಎಫ್ ಗೆ ಕೆಲಸಕ್ಕೆ ಎಂದು ಬಂದಿದ್ದರು. ಕಾರ್ಮಿಕರಿಗೆ ಕೆಜಿಎಫ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ತಮಿಳುನಾಡು ಮೂಲದ ಆರ್ ಆರ್ ಕಂಪನಿ ಗೆ ಈ ಒಂದು ಕಲ್ಲು ಕುರಿ ಸೇರಿದ್ದು ಸ್ಥಳಕ್ಕೆ ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆಂಡರ್ಸನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








