ಬಾಗಲಕೋಟೆ : ವಿದ್ಯಾರ್ಥಿನಿಯರ ಡ್ರೆಸ್ ಬದಲಾವಣೆ ಸ್ಥಳದಲ್ಲಿ ಕಲ್ಲೆಸೆದ ಹಿನ್ನೆಲೆಯಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದ್ದು, ಈ ವೇಳೆ ಹಲ್ಲೆಯ ಬಳಿಕ ಯುವಕ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಸುದೀಪ ಪಾಂಗೆ (19) ಎಂದು ತಿಳಿದುಬಂದಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ಯುವಕನಿಗೆ ಮೇಲೆ ಥಳಿಸಿದ ಮೂವರ ವಿರುದ್ಧ ಇದೀಗ FIR ದಾಖಲಾಗಿದೆ. ರಾಜು ಮಾಳೆ, ವಿಜಯ್ ಹಾಗು ಮಲ್ಲಿಕಾರ್ಜುನ ವಿರುದ್ಧ FIR ದಾಖಲಾಗಿದೆ.
ವಿದ್ಯಾರ್ಥಿನಿಯರು ಡ್ರೆಸ್ ಚೇಂಜ್ ಮಾಡುವ ಸ್ಥಳದಲ್ಲಿ ಯುವಕ ಕಲ್ಲು ಎಸೆದು ಕುಚೇಷ್ಟೆ ಮಾಡಿದ್ದಾನೆ. ಹೀಗಾಗಿ ಸುದೀಪ್ ಮೇಲೆ ಮೂವರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಯುವಕ ಸುದೀಪ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.








