ಬೆಂಗಳೂರು : ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧದ ಪರಿಣಾಮ ಇದೀಗ ಭಾರತದಾದ್ಯಂತ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದ್ದು ಅದರಲ್ಲೂ ಪ್ರಮುಖವಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ್ಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲಿಂಡರ್ ವಿತರಕರ ಕಲಾಟ ನಡೆಯುತ್ತಿದೆಯಾ ಎಂದು ತನಿಖೆ ನಡೆಸಲು ರಾಜ್ಯಕ್ಕೆ ಸಿಬಿಐ ಎಂಟ್ರಿ ಕೊಟ್ಟಿದೆ.
ಹೌದು ರಾಜ್ಯದ ಹಲವೆಡೆ ವಾಣಿಜ್ಯ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ, ವಾಣಿಜ್ಯ ಸಿಲಿಂಡರ್ ಅಭಾವ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಕಮರ್ಷಿಯಲ್ ಸಿಲಿಂಡರ್ ವಿತರಕರ ಕಳ್ಳಾಟ ನಡೆಸುತ್ತಿದ್ದಾರಾ? ಎಂದು ತನಿಖೆ ನಡೆಸಲು ಇದೀಗ ಸಿಬಿಐ ಎಂಟ್ರಿ ಕೊಟ್ಟಿದೆ.
ಈಗಾಗಲೇ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್ ಗಳು ಬಂದಾಗಿವೆ. ಇನ್ನು ಗ್ರಾಹಕರು ಸಿಲಿಂಡರ್ ಇಲ್ಲದೆ ಪರದಾಡುತ್ತಿದ್ದಾರೆ. ಸಿಲಿಂಡರ್ ಏಜೆನ್ಸಿ ಅಂಗಡಿಗಳ ಮುಂದೆ ನಿಂತು ವಾಗ್ವಾದ ನಡೆಸುತ್ತಿದ್ದಾರೆ. ಅಲ್ಲದೆ ಕೆಲವು ಸಿಲಿಂಡರ್ ವಿತರಕರು ಸಿಲಿಂಡರ್ ದರ ಒಮ್ಮೆಲೆ ಏರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಇಳಿದಿದೆ.
1. ಅಕ್ರಮದ ಸ್ವರೂಪ ಏನು?
ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಮುಖ್ಯವಾಗಿ ‘ರಿಫಿಲಿಂಗ್’ (Refilling) ದಂಧೆ ನಡೆಯುತ್ತಿದೆ ಎಂಬ ಆರೋಪವಿದೆ. ಅಂದರೆ, ಕಡಿಮೆ ಬೆಲೆಗೆ ಸಿಗುವ ಗೃಹಬಳಕೆಯ ಸಿಲಿಂಡರ್‌ಗಳಿಂದ ಅನಿಲವನ್ನು ಅಕ್ರಮವಾಗಿ ವಾಣಿಜ್ಯ ಸಿಲಿಂಡರ್‌ಗಳಿಗೆ ವರ್ಗಾಯಿಸಿ, ಹೆಚ್ಚಿನ ಬೆಲೆಗೆ ಹೋಟೆಲ್ ಮತ್ತು ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗುತ್ತಿದೆ.
2. ತನಿಖೆಗೆ ಸಿಬಿಐ ಏಕೆ?
ಸಾಮಾನ್ಯವಾಗಿ ಇಂತಹ ಪ್ರಕರಣಗಳನ್ನು ಸ್ಥಳೀಯ ಪೊಲೀಸರು ಅಥವಾ ಆಹಾರ ಇಲಾಖೆ ತನಿಖೆ ಮಾಡುತ್ತದೆ. ಆದರೆ, ಈ ಅಕ್ರಮದಲ್ಲಿ ತೈಲ ಕಂಪನಿಗಳ ಅಧಿಕಾರಿಗಳು ಮತ್ತು ಅಂತರರಾಜ್ಯ ಜಾಲಗಳು ಶಾಮೀಲಾಗಿರುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಭ್ರಷ್ಟಾಚಾರದ ಅಂಶವಿರುವುದರಿಂದ ಸಿಬಿಐ ಅಖಾಡಕ್ಕಿಳಿದಿದೆ.
3. ತನಿಖೆಯ ಪ್ರಮುಖ ಅಂಶಗಳು
-
ಅಧಿಕಾರಿಗಳ ಪಾತ್ರ: ತೈಲ ಕಂಪನಿಗಳ ವಿತರಣಾ ಜಾಲದಲ್ಲಿರುವ ಕೆಲ ಅಧಿಕಾರಿಗಳು ಈ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಯೇ ಎಂಬ ತನಿಖೆ.
-
ಗ್ಯಾಸ್ ಏಜೆನ್ಸಿಗಳ ಮೇಲೆ ಕಣ್ಣು: ರಾಜ್ಯದ ವಿವಿಧ ಭಾಗಗಳಲ್ಲಿರುವ ಗ್ಯಾಸ್ ಏಜೆನ್ಸಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
-
ಕೃತಕ ಅಭಾವ: ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೃತಕ ಅಭಾವ ಸೃಷ್ಟಿಸಿ, ಕಪ್ಪುಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ.







