ಚಾಮರಾಜನಗರ : ಚಾಮರಾಜನಗರದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಸ್ನೇಹಿತನ ಜೊತೆ ಎಣ್ಣೆ ಪಾರ್ಟಿಗೆ ಹೋದಾಗ ಯುವಕನ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ದೊಡ್ಡಕೆರೆ ಬಳಿ ಈ ಒಂದು ಕೊಲೆ ನಡೆದಿದೆ
ಕತ್ತು ಸೀಳಿದ ರೀತಿಯಲ್ಲಿ ನಂಜುಂಡಸ್ವಾಮಿ (22) ಎನ್ನುವ ಯುವಕನ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಸ್ನೇಹಿತನ ಜೊತೆಗೆ ನಂಜುಂಡಸ್ವಾಮಿ ಎಣ್ಣೆ ಪಾರ್ಟಿಗೆ ತೆರಳಿದ್ದಾನೆ ಗಾಂಜಾ ಮತ್ತಿನಲ್ಲಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಶೆಯಲ್ಲಿ ಸ್ನೇಹಿತರ ನಡುವೆ ಗಲಾಟೆ ಆಗಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಓರ್ವವನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಭಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.








