ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ನೀಡಲಾಗಿದ್ದು, ಅವರಿಗೆ ಸಿಗಲಿರುವ ಅಧಿಕೃತ ಸೌಲಭ್ಯಗಳ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಮಾಸಿಕ ವೇತನದಿಂದ ಹಿಡಿದು ಅತಿಥ್ಯ ಭತ್ಯೆಯವರೆಗೆ ಭಾರಿ ಮೊತ್ತದ ಸವಲತ್ತುಗಳನ್ನು ಸರ್ಕಾರ ನಿಗದಿಪಡಿಸಿದೆ.
ಪ್ರಮುಖ ಸೌಲಭ್ಯಗಳ ವಿವರ ಇಲ್ಲಿದೆ:
-
ವೇತನ ಮತ್ತು ಮನೆ ಬಾಡಿಗೆ: * ಪ್ರತಿ ತಿಂಗಳು 1.25 ಲಕ್ಷ ರೂಪಾಯಿ ಗೌರವ ವೇತನ.
-
ಸ್ವಂತ ಅಥವಾ ಖಾಸಗಿ ಮನೆಯಲ್ಲಿ ವಾಸವಿದ್ದರೆ ಪ್ರತಿ ತಿಂಗಳು 2.50 ಲಕ್ಷ ರೂಪಾಯಿ ಮನೆ ಬಾಡಿಗೆ ಭತ್ಯೆ (HRA).
-
-
ಭಾರಿ ಭತ್ಯೆಗಳು:
-
ವಾರ್ಷಿಕ 5 ಲಕ್ಷ ರೂಪಾಯಿ ಅತಿಥ್ಯ ಭತ್ಯೆ.
-
ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ 40 ರೂಪಾಯಿ ಪ್ರಯಾಣ ಭತ್ಯೆ.
-
ತಿಂಗಳಿಗೆ 2,000 ಲೀಟರ್ ಇಂಧನ ಭತ್ಯೆ.
-
ರಾಜ್ಯದ ಪ್ರವಾಸದ ವೇಳೆ ದಿನಕ್ಕೆ 2,500 ರೂ. ಹಾಗೂ ಹೊರ ರಾಜ್ಯದ ಪ್ರವಾಸಕ್ಕೆ ದಿನಕ್ಕೆ 3,000 ರೂ. ದಿನಭತ್ಯೆ (DA).
-
-
ಐಷಾರಾಮಿ ಜೀವನಕ್ಕೆ ಸೌಕರ್ಯ:
-
10 ಲಕ್ಷ ರೂಪಾಯಿ ಮಿತಿಯಲ್ಲಿ ಗೃಹೋಪಯೋಗಿ ವಸ್ತುಗಳು ಹಾಗೂ ಪೀಠೋಪಕರಣಗಳ ಖರೀದಿ.
-
30 ಲಕ್ಷ ರೂಪಾಯಿ ಮಿತಿಯ ವಾಹನ ಸೌಕರ್ಯ.
-
-
ಇತರ ಸವಲತ್ತುಗಳು:
-
ಮನೆ ಮತ್ತು ಕಚೇರಿಗೆ ಉಚಿತ ದೂರವಾಣಿ ಸೌಲಭ್ಯ.
-
ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಸುಸಜ್ಜಿತ ಕಚೇರಿ ಸ್ಥಳಾವಕಾಶ.
-
ಸಚಿವರಂತೆಯೇ ಕುಟುಂಬದವರಿಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ.
-
ಸರ್ಕಾರದ ಶಿಷ್ಟಾಚಾರದ ಅಡಿಯಲ್ಲಿ ಗೌರವ ಮತ್ತು ಆದ್ಯತಾ ಪಟ್ಟಿಯಲ್ಲಿ 15ನೇ ಸ್ಥಾನ.
-
ಸರಿಸುಮಾರು ಸಂಪುಟ ದರ್ಜೆಯ ಸಚಿವರಿಗೆ ಸಮಾನವಾದ ಎಲ್ಲಾ ಸವಲತ್ತುಗಳನ್ನು ನಿಗಮ-ಮಂಡಳಿ ಅಧ್ಯಕ್ಷರಿಗೂ ವಿಸ್ತರಿಸಲಾಗಿದ್ದು, ಇದು ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!








