ನೀವು ಆಂಡ್ರಾಯ್ಡ್ (Android) ಫೋನ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ವಾಚ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ನೀವು ತಕ್ಷಣವೇ ಜಾಗರೂಕರಾಗಬೇಕು. ಭಾರತದ ಕೋಟ್ಯಂತರ ಆಂಡ್ರಾಯ್ಡ್ ಸಾಧನಗಳು ಹ್ಯಾಕಿಂಗ್ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಏಜೆನ್ಸಿ CERT-In (ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಗಂಭೀರ ಎಚ್ಚರಿಕೆ ನೀಡಿದೆ.
ಏನಿದು ಅಪಾಯ?
ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯಲ್ಲಿ (OS) ಹಲವಾರು ಗಂಭೀರ ದೋಷಗಳು ಪತ್ತೆಯಾಗಿವೆ. ಹ್ಯಾಕರ್ಸ್ಗಳು ಈ ದೋಷಗಳನ್ನು ಬಳಸಿಕೊಂಡು ನಿಮ್ಮ ಸಾಧನಕ್ಕೆ ಅಕ್ರಮವಾಗಿ ಪ್ರವೇಶ ಪಡೆಯಬಹುದು. ಇದರಿಂದ ನಿಮ್ಮ ಫೋಟೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ಪಾಸ್ವರ್ಡ್ಗಳಂತಹ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಸಾಧ್ಯತೆಯಿದೆ.
ಯಾವ ಸಾಧನಗಳಿಗೆ ಹೆಚ್ಚು ಅಪಾಯ?
ಆಂಡ್ರಾಯ್ಡ್ ಆವೃತ್ತಿಗಳು: ಹಳೆಯ ಆವೃತ್ತಿಗಳಾದ ಆಂಡ್ರಾಯ್ಡ್ 12, 13, 14 ಮತ್ತು ಇತ್ತೀಚಿನ ಆಂಡ್ರಾಯ್ಡ್ 15 ಬಳಸುವ ಸಾಧನಗಳೂ ಅಪಾಯದ ವ್ಯಾಪ್ತಿಯಲ್ಲಿವೆ.
ಸಾಧನಗಳು: ಸ್ಯಾಮ್ಸಂಗ್, ಗೂಗಲ್ ಪಿಕ್ಸೆಲ್, ಒನ್ಪ್ಲಸ್ ಮತ್ತು ಶಿಯೋಮಿಯಂತಹ ಜನಪ್ರಿಯ ಬ್ರ್ಯಾಂಡ್ಗಳ ಫೋನ್ಗಳು ಮತ್ತು ಟ್ಯಾಬ್ಲೆಟ್ಗಳು.
ಸ್ಮಾರ್ಟ್ವಾಚ್: ಆಂಡ್ರಾಯ್ಡ್ ವೇರ್ ಓಎಸ್ (Wear OS) ನಲ್ಲಿ ಚಲಿಸುವ ಸ್ಮಾರ್ಟ್ವಾಚ್ಗಳು.
ಹ್ಯಾಕಿಂಗ್ನಿಂದ ಬಚಾವಾಗಲು ತಕ್ಷಣವೇ ಈ ಕ್ರಮ ಕೈಗೊಳ್ಳಿ:
ಸಿಸ್ಟಮ್ ಅಪ್ಡೇಟ್ (Update Now): ನಿಮ್ಮ ಫೋನ್ನ Settings > System > System Update ಗೆ ಹೋಗಿ ಇತ್ತೀಚಿನ ಸೆಕ್ಯೂರಿಟಿ ಪ್ಯಾಚ್ ಅಪ್ಡೇಟ್ ಮಾಡಿ.
ಗೂಗಲ್ ಪ್ಲೇ ಪ್ರೊಟೆಕ್ಟ್: ಪ್ಲೇ ಸ್ಟೋರ್ನಲ್ಲಿ ‘Play Protect’ ಆನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಅಪರಿಚಿತ ಲಿಂಕ್ಗಳು: ವಾಟ್ಸಾಪ್ ಅಥವಾ ಎಸ್ಎಂಎಸ್ ಮೂಲಕ ಬರುವ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
ಅನಧಿಕೃತ ಆ್ಯಪ್ಗಳು: ಗೂಗಲ್ ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಯಾವುದೇ ವೆಬ್ಸೈಟ್ಗಳಿಂದ ಆ್ಯಪ್ಗಳನ್ನು (APK) ಡೌನ್ಲೋಡ್ ಮಾಡಬೇಡಿ








