ಮಂಗಳೂರು: ರೈಲಿನಲ್ಲಿ ನಿಗೂಢವಾಗಿ ಸಾಗಿಸುತ್ತಿದ್ದಂತ 200ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳನ್ನು ರೈಲ್ವೆ ಪೊಲೀಸರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಆರ್ ಪಿ ಎಫ್ ಪೊಲೀಸರು ಕಾರ್ಯಾಚರಣೆ ನಡೆಸಿ, 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೆಕೆಂಡ್ ಹ್ಯಾಂಡ್ 200ಕ್ಕೂ ಹೆಚ್ಚು ಮೊಬೈಲ್ ಗಳಲ್ಲಿ ಜಪ್ತಿ ಮಾಡಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಆರ್ ಪಿ ಎಫ್ ಪೊಲೀಸರು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಮಾಡುತ್ತಿದ್ದಾಗ ಮೊಬೈಲ್ ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಪಾಲಕ್ಕಾಡ್ ವಿಭಾಗದ ರೈಲ್ವೆ ಸಂರಕ್ಷಣಾ ಪಡೆ ಕಗಣ್ಗಾವಲನ್ನು ತೀವ್ರಗೊಳಿಸಿದೆ.
ರೈಲಿನ ಮೂಲಕ ನಗದು, ಚಿನ್ನ, ಬೆಲೆ ಬಾಳುವ ವಸ್ತುಗಳ ಸಾಗಾಟದ ಬಗ್ಗೆ ಮಾಹಿತಿಯು ರೈಲ್ವೆ ಪೊಲೀಸರ ಕಣ್ಗಾವಲು ಪಡೆಗೆ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಜಾಮ್ ನಗರ – ತಿರುನಲ್ವೇಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಫ್ಲಾಟ್ ಫಾರ್ಮ್ ನಂ.3ರಲ್ಲಿ ತಪಾಸಣೆ ನಡೆಸಿದಾಗ 200ಕ್ಕೂ ಹೆಚ್ಚು ಮೊಬೈಲ್ ಗಳು ಪತ್ತೆಯಾಗಿವೆ.
ರೈಲಿನ ಸಾಮಾನ್ಯ ಕೋಚ್ ನಲ್ಲಿ ಆರ್ ಪಿಎಫ್ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಲಗೇಜ್ ರಾಕ್ ನಲ್ಲಿ ವಾರಸುದಾರರಿಲ್ಲದ 3 ಬ್ಯಾಗ್ ಗಳು ಪತ್ತೆಯಾಗಿದ್ದವು. ಅನುಮಾನಗೊಂಡು ಬ್ಯಾಗ್ ಪರಿಶೀಲಿಸಿದಾಗ 200ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳು ಪತ್ತೆಯಾಗಿದ್ದಾವೆ.
ವೇತನ ಪಾವತಿಗೆ ಆಗ್ರಹ: GBA ಪಶ್ಚಿಮ ನಗರ ಪಾಲಿಕೆ ಕೆಲಸ ಸ್ಥಗಿತದ ಎಚ್ಚರಿಕೆ ನೀಡಿದ ಕ್ಷೇಮಾಭಿವೃದ್ಧಿ ಸಂಘ








