ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಮಹಿಳೆಯರಿಗೆ ಎಂದೇ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಇದೀಗ ಈ ಯೋಜನೆಯಲ್ಲಿ ಅಧಿಕಾರಿಗಳ ಮಹಾ ನಿರ್ಲಕ್ಷದಿಂದ ಭಾರಿ ಯಡವಟ್ಟು ಬಯಲಾಗಿದ್ದು, ಕಳೆದ ಮೂರು ವರ್ಷದಲ್ಲಿ ಮೃತರ ಖಾತೆಗೆ ಇದುವರೆಗೂ 12 ಕೋಟಿ ಜಮೆ ಆಗಿದೆ ಎನ್ನುವುದು ಬಯಲಾಗಿದೆ.
ಹೌದು ಹಣ ಬಿಡುಗಡೆ ವಿಳಂಬ ಸೇರಿ ತಾಂತ್ರಿಕ ಸಮಸ್ಯೆಗಳಿಂದ ಸದಾ ಚರ್ಚೆಗೆ ಬರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂಡು ಯಡವಟ್ಟು ಬಟಾಬಯಲಾಗಿದೆ. ಬೀದರ್ ಜಿಲ್ಲೆಯಲ್ಲಿ ಅಧಿಕಾರಿಗಳ ನಿಷ್ಕಾಳಜಿಯಿಂದ ಮೃತ 5327 ಯೋಜನಾ ಫಲಾನುಭವಿಗಳಿಗೆ ಸುಮಾರು 12 ಕೋಟಿ ರೂ. ಹಣ ಜಮೆಯಾಗಿ ಗೋಲ್ಮಾಲ್ ಮಾಡಿದ್ದಾರೆ.
ಸತ್ತಿರುವ 5 ಸಾವಿರಕ್ಕೂ ಅಧಿಕ ಮಹಿಳೆಯರ ಅಕೌಂಟ್‌ಗೆ ಕೋಟಿ ಕೋಟಿ ಹಣ ಹಾಕಿ, ಗೋಲ್ಮಾಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಬೀದರ್ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಬರುವ 5327 ಫಲಾನುಭವಿಗಳು ಮೃತಪಟ್ಟಿದ್ದು, ಅವರ ಒಟ್ಟಾರೆ ಕಂತುಗಳು 59,954 ಆಗಿದ್ದು, ಪ್ರತಿ ತಿಂಗಳು 2 ಸಾವಿರ ರೂ.ನಂತೆ ಸುಮಾರು 12 ಕೋಟಿ ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಆಗಿದೆ.
ಇನ್ನೂ ಈ ಫಲಾನುಭವಿಗಳಿಗೆ ಯಾವುದೇ ದೋಷವಿಲ್ಲದೇ ಪ್ರತಿ ತಿಂಗಳು ಹಣ ಹೋಗಿದ್ದಲ್ಲಿ ಆ ಮೊತ್ತ 31.96 ಕೋಟಿ ರೂ. ಆಗಲಿದೆ. ಮೃತ ಫಲಾನುಭವಿಗಳ ಖಾತೆಗೂ ಗೃಹ ಲಕ್ಷ್ಮಿ ಹಣ ಹೋಗುತ್ತಿರುವುದು ಬಹಿರಂಗವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ಮೃತರ ಮಾಹಿತಿಯನ್ನು ಪಡೆದು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಮೂದಿಸಲು ಸೂಚಿಸಲಾಗಿದೆ. ಜೊತೆಗೆ ಈಗಾಗಲೇ ಜಮೆಯಾದ ಧನ ಸಹಾಯವನ್ನು ಸರ್ಕಾರಕ್ಕೆ ಪಾವತಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದ್ದು, ಅದರಂತೆ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲು ಎಸ್‌ಎಲ್‌ಬಿಸಿ ಮೂಲಕ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ.








