ರಾಯಚೂರು : ಕರೆಂಟ್ ಶಾಕ್ ನಿಂದ ಸ್ನೇಹಿತನೊಬ್ಬ ಸಾವನ್ನಪ್ಪಿದ್ದಾನೆ. ಇದರಿಂದ ಭಯದಿಂದ ಚೀಲದಲ್ಲಿ ಆತನ ಶವ ಇಟ್ಟು ಅಪ್ರಾಪ್ತರು ಕೆರೆಗೆ ಎಸೆಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಕರಡಕಲ್ ಕೆರೆಯಲ್ಲಿ ಈ ಒಂದು ಕೃತ್ಯ ನಡೆದಿದೆ.
ಚೀಲದಲ್ಲಿ 15 ವರ್ಷದ ಬಾಲಕ ಕಾರ್ತಿಕ್ ಶವ ಪತ್ತೆಯಾಗಿತ್ತು. ಮಾರ್ಚ್ 9ಕ್ಕೆ ಲಿಂಗಸುಗೂರಿಗೆ ಗುಂಡಸಾಗರಿನ ಕಾರ್ತಿಕ್ ಬಂದಿದ್ದಾನೆ. ಶಾಲಾ ವಾರ್ಷಿಕೋತ್ಸವಕ್ಕೆ ಬಟ್ಟೆ ತೆಗೆದುಕೊಳ್ಳುವುದಕ್ಕೆ ಬಂದಿದ್ದಾನೆ. ವಾಪಸ್ ಹೋಗುತ್ತಿದ್ದಾಗ ಹೊಲದಲ್ಲಿ ಇರುವಂತಹ ಬೋರ್ವೆಲ್ ಬಳಿ ನೀರು ಕುಡಿಯಲು ಎಂದು ಹೋದಾಗ ಕರೆಂಟ್ ಶಾಕ್ ನಿಂದ ಕಾರ್ತಿಕ್ ಸಾವನಪ್ಪಿದ್ದಾನೆ. ಕೂಡಲೇ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಗೆಳೆಯರು ಪ್ರಯತ್ನಿಸಿದ್ದಾರೆ.
ಆದರೆ ಮಾರ್ಗ ಮಧ್ಯೆ ಸ್ನೇಹಿತ ಕಾರ್ತಿಕ್ ಕೊನೆಯುಸಿರುಳಿದಿದ್ದಾನೆ. ಬೈಕಿನಲ್ಲಿ ಬರುವ ವೇಳೆ ಕಾರ್ತಿಕ್ ಕಾಲಿಗೆ ಗಾಯವಾಗಿತ್ತು. ಕಾಲಿನಿಂದ ರಕ್ತ ಸೋರುತ್ತಿದ್ದ ಕಂಡು ಸ್ನೇಹಿತರು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ಭಯದಲ್ಲಿ ಸ್ನೇಹಿತರು ಕಾರ್ತಿಕ ಶವವನ್ನು ಕೆರೆಯಲ್ಲಿ ಎಸೆದಿದ್ದರೆ. ಇನ್ನು ಇತ್ತ ಕಾರ್ತಿಕ್ ಪೋಷಕರು ಇನ್ನು ಯಾಕೆ ಮಗ ಬರಲಿಲ್ಲ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಬಳಿಕ ಪೊಲೀಸರು ಕಾರ್ತಿಕ್ ಸ್ನೇಹಿತರನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.








