ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಚಲಿಸುತ್ತಿದ್ದ ಕಾರಿನ ಮೇಲೆ ಕಂಟೇನರ್ ಪಲ್ಟಿಯಾಗಿ 5 ವರ್ಷದ ಮಗು ಸಾವನ್ನಪ್ಪಿದೆ. ಬಿಣಗಿ ಗ್ರಾಮದ ಬಳಿ ಘಟ್ಟದಲ್ಲಿ ಐದು ವರ್ಷದ ಮಗು ಸ್ಥಳದಲ್ಲಿ ಸಾವನಪ್ಪಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಿ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವೈದ್ಯ ದಂಪತಿ ಮತ್ತು ಮತ್ತೊಂದು ಮಗುವಿಗೆ ಗಂಭೀರವಾದ ಗಾಯಗಳಾಗಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರವಾರದಿಂದ ಅಂಕೋಲ ಕಡೆಗೆ ಕಾರು ಹಾಗೂ ಕಂಟೇನರ್ ತೆರಳುತ್ತಿತ್ತು ಮಾತನಾಡಲು ಸಾಧ್ಯವಾಗದಷ್ಟು ಕಂಟೇನರ್ ಚಾಲಕ ಮಧ್ಯ ಸೇವಿಸಿದ್ದ ಎಂದು ತಿಳಿದುಬಂದಿದೆ. ಪ್ರವಾಸಕ್ಕೆ ಎಂದು ಮಹಾರಾಷ್ಟ್ರ ಮೋಡದ ಕುಟುಂಬ ಕಿಯಾ ಕಾರಿನಲ್ಲಿ ಬಂದಿತ್ತು.








