Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM

RCB IPL 2026 Schedule : ಮಾ.28ರಿಂದ ‘IPL’ ಆರಂಭ ; ‘RCB’ ಯಾವ ದಿನ, ಯಾವ ತಂಡದ ಜೊತೆ ಸೆಣಸಾಡಲಿದೆ.? ಪೂರ್ಣ ವೇಳಾಪಟ್ಟಿ ಇಲ್ಲಿದೆ!

11/03/2026 8:13 PM

BIG NEWS : ಕರ್ನಾಟಕದಲ್ಲಿ ₹6.70 ಲಕ್ಷ ಕೋಟಿ ಮೊತ್ತದ 117 ಹೂಡಿಕೆ ಒಪ್ಪಂದಗಳಿಗೆ ಸಹಿ : 2.47 ಲಕ್ಷ ಉದ್ಯೋಗಗಳ ಸೃಷ್ಟಿ

11/03/2026 7:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಐಐಐಟಿ’-ಧಾರವಾಡದ ವಿದ್ಯಾರ್ಥಿಗೆ ನಿರಾಳತೆ ತಂದ ‘ಪಿಎಂ ಯಶಸ್ವಿ’ ವಿದ್ಯಾರ್ಥಿವೇತನ
KARNATAKA

‘ಐಐಐಟಿ’-ಧಾರವಾಡದ ವಿದ್ಯಾರ್ಥಿಗೆ ನಿರಾಳತೆ ತಂದ ‘ಪಿಎಂ ಯಶಸ್ವಿ’ ವಿದ್ಯಾರ್ಥಿವೇತನ

By kannadanewsnow0909/03/2026 3:41 PM

ಧಾರವಾಡ: ಧಾರವಾಡದ ‘ಇಂಡಿಯನ್ ಇನ್‌ಸ್ಟಿಟಿಟ್ಯೂಟ್ ಆಫ್ ಇನ್‌ಫರ್ಮೇಶನ್‌ ಟೆಕ್ನಾಲಜಿ'(ಐಐಐಟಿ) ವಿದ್ಯಾರ್ಥಿ ರಾಕೇಶ್ ಗಡುಪುಡಿ ಅವರು ‘ಸದೃಢ ಭಾರತಕ್ಕಾಗಿ ಪಿಎಂ ಯುವ ಸಾಧಕರ ವಿದ್ಯಾರ್ಥಿವೇತನ ಪ್ರಶಸ್ತಿ ಯೋಜನೆ’ (ಪಿಎಂ ಯಶಸ್ವಿ) ಅಡಿಯಲ್ಲಿ ನೆರವು ಪಡೆದ ಹಿನ್ನೆಲೆಯಲ್ಲಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತನ್ನ ಅಧ್ಯಯನವನ್ನು ಮುಂದುವರಿಸಲು ಆರ್ಥಿಕ ತೊಂದರೆಯನ್ನು ಎದುರಿಸಿದ ವಿದ್ಯಾರ್ಥಿಗೆ ವಿದ್ಯಾರ್ಥಿವೇತನವು ಗಮನಾರ್ಹ ನಿರಾಳತೆಯನ್ನು ನೀಡಿದೆ ಮತ್ತು ಆತ್ಮವಿಶ್ವಾಸದಿಂದ ತನ್ನ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದೆ.

ವಿದ್ಯಾರ್ಥಿ ಬರೆದ ಪತ್ರವು ಕೇವಲ ಕೃತಜ್ಞತಾ ಪತ್ರವಾಗಿರಲಿಲ್ಲ; ಬದಲಿಗೆ ಅದು ಸಮಯೋಚಿತ ನೆರವಿನ ಮಹತ್ವ ಮತ್ತು ‘ಪಿಎಂ ಯಶಸ್ವಿ’ಯಂತಹ ಯೋಜನೆಗಳ ತಳಮಟ್ಟದ ಪರಿಣಾಮವನ್ನು ಸೂಚಿಸುವಂತಿತ್ತು.

ರಾಕೇಶ್ ಅವರು ಈ ಹಿಂದೆ ಪ್ರಧಾನಿಗೆ ಪತ್ರ ಬರೆದು, ತಾವು ಬಡ ಕುಟುಂಬದಿಂದ ಬಂದವರು ಮತ್ತು ತಮ್ಮ ಶಿಕ್ಷಣವನ್ನು ಬೆಂಬಲಿಸಲು ವಿದ್ಯಾರ್ಥಿವೇತನವು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದರು. ಕಾಲೇಜಿನ ಮೊದಲ ವರ್ಷದಲ್ಲಿ ವಿದ್ಯಾರ್ಥಿವೇತನ ಯೋಜನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ. ಆದರೆ, ಅದರ ಬಗ್ಗೆ ತಿಳಿದ ನಂತರ ಅವರು ತಮ್ಮ ಎರಡನೇ ವರ್ಷದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಅವರು ಪತ್ರದಲ್ಲಿ ತಿಳಿಸಿದ್ದರು.

ಅರ್ಜಿಯನ್ನು ಸಂಸ್ಥೆಯು ಅನುಮೋದಿಸಿತ್ತಾದರೂ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂತಿಮ ಅನುಮೋದನೆ ಜನವರಿ 2025 ರಿಂದ ಬಾಕಿ ಉಳಿದಿತ್ತು. ಈ ವಿಳಂಬವು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಮತ್ತು ಅಧ್ಯಯನದತ್ತ ಗಮನ ಕೇಂದ್ರೀಕರಿಸುವ ತಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿಯವರ ನೆರವು ಕೋರಿ ಬರೆದ ಪತ್ರದಲ್ಲಿ ರಾಕೇಶ್‌ ಅವರು ತಿಳಿಸಿದ್ದರು. ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಅರ್ಹ ವಿದ್ಯಾರ್ಥಿಗಳು ತೊಂದರೆ ಎದುರಿಸದಂತೆ ತ್ವರಿತ ಅನುಮೋದನೆ ನೀಡಬೇಕೆಂದು ಅವರು ವಿನಂತಿಸಿದ್ದರು.

ಈ ಸಮಸ್ಯೆ ಪರಿಹಾರವಾದ ಬಳಿಕ ಮತ್ತು ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿದ ನಂತರ, ರಾಕೇಶ್ ಅವರು ಡಿಸೆಂಬರ್ 2025 ರಲ್ಲಿ ಪ್ರಧಾನಿಯವರಿಗೆ ಮತ್ತೆ ಪತ್ರ ಬರೆದು ತಮ್ಮ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪಾರದರ್ಶಕ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಪಾತ್ರವನ್ನು ಕೊಂಡಾಡಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ, “ದೀರ್ಘಕಾಲದ ಅಭಿಮಾನಿಯಾಗಿ, ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ನಿರ್ಮಿಸುವ ನಿಮ್ಮ ದೂರದೃಷ್ಟಿ ಮತ್ತು ಸಮರ್ಪಣೆಯಿಂದ ನಾನು ಸದಾ ಸ್ಫೂರ್ತಿ ಪಡೆದಿದ್ದೇನೆ. ದೇಶದ ಯುವಕರಿಗೆ ನಿಮ್ಮ ಬದ್ಧತೆ ಮತ್ತು ಪಾರದರ್ಶಕ ಆಡಳಿತವು ‘ಪಿಎಂ ಕುಂದುಕೊರತೆ ಪೋರ್ಟಲ್’ನಂತಹ ವೇದಿಕೆಗಳ ಮೂಲಕ ಸ್ಪಷ್ಟವಾಗಿದೆ,” ಎಂದು ಪ್ರಧಾನಿಯವರನ್ನು ಪ್ರಶಂಸಿಸಿದ್ದಾರೆ.

ಸಮಸ್ಯೆಯ ಪರಿಹಾರದ ನಂತರ, ವಿದ್ಯಾರ್ಥಿವೇತನದ ಬೆಂಬಲವು ತನ್ನ ಮತ್ತು ಕುಟುಂಬಕ್ಕೆ ಅಮೂಲ್ಯವಾಗಿದೆ ಎಂದು ರಾಕೇಶ್ ಪತ್ರದಲ್ಲಿ ತಿಳಿಸಿದ್ದಾರೆ. ಇದು ವಿಶ್ವಾಸದಿಂದ ತನ್ನ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದಿರುವ ಅವರು ವಿದ್ಯಾರ್ಥಿಗಳು ಮತ್ತು ನಾಗರಿಕರ ಕಲ್ಯಾಣಕ್ಕಾಗಿ ನಿರಂತರ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ, ಧನ್ಯವಾದ ಅರ್ಪಿಸಿದ್ದಾರೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನೇಮಕಾತಿ: ಏಪ್ರಿಲ್.9ರಂದು ಲಿಖಿತ ಪರೀಕ್ಷೆ

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ

Share. Facebook Twitter LinkedIn WhatsApp Email

Related Posts

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM2 Mins Read

BIG NEWS : ಕರ್ನಾಟಕದಲ್ಲಿ ₹6.70 ಲಕ್ಷ ಕೋಟಿ ಮೊತ್ತದ 117 ಹೂಡಿಕೆ ಒಪ್ಪಂದಗಳಿಗೆ ಸಹಿ : 2.47 ಲಕ್ಷ ಉದ್ಯೋಗಗಳ ಸೃಷ್ಟಿ

11/03/2026 7:52 PM1 Min Read

ಸಾಗರದಲ್ಲಿ ‘ಫ್ಲೆಕ್ಸ್ ಹಾವಳಿ’ಯ ವಿರುದ್ಧ ಸಿಡಿದೆದ್ದ ಬಿಜೆಪಿ: ನಗರಸಭೆ ಮುಂದೆ ಪ್ರತಿಭಟಿಸಿ ಆಕ್ರೋಶ

11/03/2026 7:47 PM3 Mins Read
Recent News

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM

RCB IPL 2026 Schedule : ಮಾ.28ರಿಂದ ‘IPL’ ಆರಂಭ ; ‘RCB’ ಯಾವ ದಿನ, ಯಾವ ತಂಡದ ಜೊತೆ ಸೆಣಸಾಡಲಿದೆ.? ಪೂರ್ಣ ವೇಳಾಪಟ್ಟಿ ಇಲ್ಲಿದೆ!

11/03/2026 8:13 PM

BIG NEWS : ಕರ್ನಾಟಕದಲ್ಲಿ ₹6.70 ಲಕ್ಷ ಕೋಟಿ ಮೊತ್ತದ 117 ಹೂಡಿಕೆ ಒಪ್ಪಂದಗಳಿಗೆ ಸಹಿ : 2.47 ಲಕ್ಷ ಉದ್ಯೋಗಗಳ ಸೃಷ್ಟಿ

11/03/2026 7:52 PM

ಸಾಗರದಲ್ಲಿ ‘ಫ್ಲೆಕ್ಸ್ ಹಾವಳಿ’ಯ ವಿರುದ್ಧ ಸಿಡಿದೆದ್ದ ಬಿಜೆಪಿ: ನಗರಸಭೆ ಮುಂದೆ ಪ್ರತಿಭಟಿಸಿ ಆಕ್ರೋಶ

11/03/2026 7:47 PM
State News
KARNATAKA

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

By kannadanewsnow5711/03/2026 8:15 PM KARNATAKA 2 Mins Read

14 ವರ್ಷದ ಹೆಣ್ಣು ಮಕ್ಕಳು ತಪ್ಪದೇ ಹೆಚ್.ಪಿ.ವಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್…

BIG NEWS : ಕರ್ನಾಟಕದಲ್ಲಿ ₹6.70 ಲಕ್ಷ ಕೋಟಿ ಮೊತ್ತದ 117 ಹೂಡಿಕೆ ಒಪ್ಪಂದಗಳಿಗೆ ಸಹಿ : 2.47 ಲಕ್ಷ ಉದ್ಯೋಗಗಳ ಸೃಷ್ಟಿ

11/03/2026 7:52 PM

ಸಾಗರದಲ್ಲಿ ‘ಫ್ಲೆಕ್ಸ್ ಹಾವಳಿ’ಯ ವಿರುದ್ಧ ಸಿಡಿದೆದ್ದ ಬಿಜೆಪಿ: ನಗರಸಭೆ ಮುಂದೆ ಪ್ರತಿಭಟಿಸಿ ಆಕ್ರೋಶ

11/03/2026 7:47 PM

ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಹಣ ದುರ್ಬಳಕೆ: ಬಿಜೆಪಿ ಮುಖಂಡ ಅರುಣ್ ಕುಗ್ವೆ ಗಂಭೀರ ಆರೋಪ

11/03/2026 7:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.