ಅಹಮದಾಬಾದ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ವಿಶ್ವಕಪ್ ಮುಕುಟ ಮುಡಿಗೇರಿಸಿಕೊಂಡ ಭಾರತ ತಂಡ, ಈಗ ಕೋಟಿ ಕೋಟಿ ಹಣವನ್ನು ತನ್ನದಾಗಿಸಿಕೊಂಡಿದೆ. ಕೇವಲ ಟ್ರೋಫಿ ಮಾತ್ರವಲ್ಲದೆ, ಐಸಿಸಿ ನೀಡುವ ಬೃಹತ್ ಮೊತ್ತದ ಬಹುಮಾನವೂ ಟೀಮ್ ಇಂಡಿಯಾ ಪಾಲಾಗಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಗೆಲುವು ದಾಖಲಿಸಿ ಮೂರನೇ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್ ಔಟ್ ಆಗಿದೆ.
ಬಹುಮಾನದ ಮೊತ್ತದ ವಿವರ:
ಐಸಿಸಿ ಈ ಬಾರಿ ಒಟ್ಟು 120 ಕೋಟಿ ರೂಪಾಯಿಗಳ ಬಹುಮಾನದ ನಿಧಿಯನ್ನು ಘೋಷಿಸಿತ್ತು. ಪಂದ್ಯಾವಳಿಯಲ್ಲಿ ತಂಡಗಳ ಸಾಧನೆಗೆ ಅನುಗುಣವಾಗಿ ಈ ಹಣವನ್ನು ಹಂಚಿಕೆ ಮಾಡಲಾಗಿದೆ:
ವಿಜೇತ ತಂಡ (ಭಾರತ): ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಭಾರತಕ್ಕೆ 3 ಮಿಲಿಯನ್ ಡಾಲರ್ (ಸುಮಾರು 27.48 ಕೋಟಿ ರೂ.) ಲಭಿಸಿದೆ.
ರನ್ನರ್ ಅಪ್ (ನ್ಯೂಜಿಲೆಂಡ್): ಫೈನಲ್‌ನಲ್ಲಿ ಸೋತ ನ್ಯೂಜಿಲೆಂಡ್ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 14.65 ಕೋಟಿ ರೂ.) ನೀಡಲಾಗಿದೆ.
ಸೆಮಿಫೈನಲಿಸ್ಟ್ ಗಳು: ಸೆಮಿಫೈನಲ್‌ನಲ್ಲಿ ಸೋತ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೆ ತಲಾ 7.24 ಕೋಟಿ ರೂ. ಸಿಕ್ಕಿದೆ.
ಸೂಪರ್ 8 ಹಂತ: ಈ ಹಂತ ತಲುಪಿದ ತಂಡಗಳಿಗೆ ತಲಾ 3.48 ಕೋಟಿ ರೂ. ಲಭಿಸಿದೆ.
ಗುಂಪು ಹಂತ: ಪಂದ್ಯಾವಳಿಯಲ್ಲಿ ಭಾಗವಹಿಸಿದ ಪ್ರತಿಯೊಂದು ತಂಡಕ್ಕೂ ಕನಿಷ್ಠ 2.29 ಕೋಟಿ ರೂ. ಪಾವತಿಸಲಾಗಿದೆ.
Not just a team. A family.
Not just a trophy. A dream for a billion of us.PROUD to lead this group, PROUD to represent my India 🇮🇳🏆 A huge thank you to everyone standing beside me. You are the pillars of my strength 💙🙌🏼🫶🏻 pic.twitter.com/1fZ1DH3o5M
— Surya Kumar Yadav (@surya_14kumar) March 8, 2026
𝐂.𝐇.𝐀.𝐌.𝐏.𝐈.𝐎.𝐍.𝐒 🇮🇳#TeamIndia clinch a record 3️⃣rd ICC Men's #T20WorldCup title 🏆
Take. A. Bow 🫡#MenInBlue | #Final | #INDvNZ pic.twitter.com/nml1AZY5tK
— BCCI (@BCCI) March 8, 2026
The smiles say it all 😌
Vibe of champions 😎#TeamIndia | #T20WorldCup | #MenInBlue | #Final pic.twitter.com/F65Rn4Fi1E
— BCCI (@BCCI) March 8, 2026








