ನವದೆಹಲಿ : ರಾಜಕೀಯವಾಗಿ ಪ್ರಮುಖ ಹೆಜ್ಜೆಗಳನ್ನ ಇಡುತ್ತಿರುವ ತಮಿಳು ಸೂಪರ್‌ಸ್ಟಾರ್ ವಿಜಯ್’ಗೆ ಅನಿರೀಕ್ಷಿತ ಆಘಾತಗಳು ಎದುರಾಗುತ್ತಿವೆ. ‘ತಮಿಳಗ ವೆಟ್ರಿ ಕಲಗಂ’ (ಟಿವಿಕೆ) ಪಕ್ಷವನ್ನು ಸ್ಥಾಪಿಸಿ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲು ಬಯಸುವ ದಳಪತಿ ವಿಜಯ್’ಗೆ ಅವರ ಪತ್ನಿ ಮತ್ತೊಂದು ಹೊಡೆತ ನೀಡಿದ್ದಾರೆ. ನಟಿ ತ್ರಿಶಾ ಜೊತೆ ವಿಜಯ್ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪತ್ನಿಯಿಂದ ಈ ಅರ್ಜಿ ಸಲ್ಲಿಕೆಯಾಗಿದೆ.
ಅಂದ್ಹಾಗೆ, ವಿಜಯ್ ಪತ್ನಿ ಸಂಗೀತಾ ಈಗಾಗಲೇ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವುದು ಈಗಾಗಲೇ ತಿಳಿದಿದೆ. ಸಧ್ಯ ಸಂಗೀತಾ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನ ಪ್ರಕರಣ ಮುಗಿಯುವವರೆಗೆ ಮನೆಯಲ್ಲಿಯೇ ಇರಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ನಡುವೆ ವಿಜಯ್ ಅವರ ವಿಚ್ಛೇದನ ಪ್ರಕರಣ ಏಪ್ರಿಲ್ 20ರಂದು ಚೆಂಗಲ್ಪಟ್ಟುವಿನ ಜಿಲ್ಲಾ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಮಧ್ಯೆ, ಮತ್ತೊಂದು ಅರ್ಜಿ ಸಲ್ಲಿಸುವುದು ಚರ್ಚೆಯ ವಿಷಯವಾಗಿದೆ.
48 ವರ್ಷದ ಸಂಗೀತಾ ಬ್ರಿಟಿಷ್ ರಾಜಧಾನಿ ಲಂಡನ್’ನ ಉದ್ಯಮಿಯೊಬ್ಬರ ಮಗಳು. ಅವರು ಹಿಂದುವಾಗಿದ್ದು, ಕ್ರಿಶ್ಚಿಯನ್ ಆಗಿರುವ ನಟ ವಿಜಯ್ ಅವರನ್ನ ಪ್ರೀತಿಸಿ ವಿವಾಹವಾದರು. ದಂಪತಿಗಳು ಜುಲೈ 10, 1998 ರಂದು ಲಂಡನ್’ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಬಳಿಕ ಅವರು ಅಲ್ಲಿಯೂ ವಿವಾಹವಾಗಿದ್ದು, ನಂತರ, ವಿಜಯ್ ಮತ್ತು ಸಂಗೀತಾ ಆಗಸ್ಟ್ 1999ರಲ್ಲಿ ಚೆನ್ನೈನಲ್ಲಿ ಮತ್ತೆ ವಿವಾಹವಾದರು. ಅವರಿಗೆ 25 ವರ್ಷದ ಮಗ ಮತ್ತು 20 ವರ್ಷದ ಮಗಳು ಇದ್ದಾರೆ.
ವಿಜಯ್ ಮತ್ತು ಸಂಗೀತಾ ಭಿನ್ನಾಭಿಪ್ರಾಯಗಳಿಂದಾಗಿ ಐದು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಸಂಗೀತಾ ಫೆಬ್ರವರಿ 24ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ತನ್ನ ಪತಿ ವಿಜಯ್’ನಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ನಡುವಿನ ವಿವಾಹವನ್ನ ರದ್ದುಗೊಳಿಸಬೇಕೆಂದು ಅವರು ಕೋರಿದರು. ಈ ಅರ್ಜಿಯನ್ನು ಜಿಲ್ಲಾ ಕುಟುಂಬ ಕಲ್ಯಾಣ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಸಂಗೀತಾ ಸಲ್ಲಿಸಿದ ಅರ್ಜಿಯನ್ನ ಏಪ್ರಿಲ್ 20 ರಂದು ವಿಚಾರಣೆ ನಡೆಸಲಾಗುವುದು. ಆ ದಿನ ಇಬ್ಬರೂ ಹಾಜರಾಗಲಿದ್ದಾರೆ.
Government Scheme : ನಿಮ್ಮ ಹಣ ಡಬಲ್ ಮಾಡುವ ಈ ಯೋಜನೆಯ ಬಗ್ಗೆ ನಿಮ್ಗೆ ಗೊತ್ತಾ.?
ಮನೆಯಲ್ಲಿ ಬೆಲ್ಲದ ಶುದ್ಧತೆ ಪರಿಶೀಲಿಸುವುದು ಹೇಗೆ.? : ‘FSSAI’ ತಿಳಿಸಿದ ಸುಲಭ ಸಲಹೆ ಅನುಸರಿಸಿ!








