ಹಾಸನ: ಜಿಲ್ಲೆಯ ಕೆರೆಯೊಂದಕ್ಕೆ ಈಜಲು ತೆರಳಿದ್ದಂತ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತ ಘಟನೆ ಓಂನಗರ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಓಂನಗರ ಗ್ರಾಮದಲ್ಲಿನ ಪ್ರಕಾಶ್ ಎಂಬುವರ ಕಾಫಿ ತೋಟದ ಕೆರೆಯಲ್ಲಿ ಈಜಾಡಲು ತೆರಳಿದ್ದರು. ಆದರೇ ನಾಲ್ವರ ಪೈಕಿ ಕೆಸರಲ್ಲಿ ಸಿಲುಕಿ ವಿದ್ಯಾರ್ಥಿಗಳಾದಂತ ಭರತ್(18), ಮಿಥುನ್(19) ಎಂಬುವರು ಸಾವನ್ನಪ್ಪಿದ್ದಾರೆ.
ಮೃತ ಭರತ್ ಹಾಗೂ ಮಿಥುನ್ ಪಾಳ್ಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಾಲ್ವರ ಸ್ನೇಹಿತರು ಕೆರೆಗೆ ಈಜಾಡೋದಕ್ಕೆ ತೆರಳಿದ್ದರು. ಆದರೇ ಕೆಸರಲ್ಲಿ ಸಿಲುಕಿ ಭರತ್, ಮಿಥುನ್ ಸಾವನ್ನಪ್ಪಿದರೇ ಮತ್ತಿಬ್ಬರು ದಡ ಸೇರಿದ್ದಾರೆ. ಮೃತರಿಬ್ಬರ ಶವಗಳನ್ನು ಸ್ಥಳೀಯರು ಕೆರೆಯಿಂದ ಹೊರ ತಂದಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಭರತ್, ಮಿಥುನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
‘ಮುಖ್ಯಮಂತ್ರಿ ಸ್ಥಾನ’ದಿಂದ ‘ಸಿದ್ಧರಾಮಯ್ಯ’ ಔಟ್? | CM Siddaramaiah
BREAKING : ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ







