Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬೊಜ್ಜು, ಸಕ್ಕರೆ ಕಾಯಿಲೆ ಮತ್ತು ಹಾರ್ಟ್ ಅಟ್ಯಾಕ್: ಯಾವುದು ಮೊದಲು? ಈ ‘ಡೆಡ್ಲಿ’ ಸರಣಿ ತಪ್ಪಿಸುವುದು ಹೇಗೆ?

06/03/2026 9:39 AM

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !

06/03/2026 9:29 AM

ಮಾರ್ಚ್ 6 ಈ 4 ರಾಶಿಗೆ ಅಖಂಡ ರಾಜಯೋಗ 

06/03/2026 9:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !
INDIA

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !

By kannadanewsnow5706/03/2026 9:29 AM

ದಮೋಹ್ (ಮಧ್ಯಪ್ರದೇಶ): ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬವಾದ ‘ಭಾಯ್ ದೂಜ್’ ದಿನದಂದೇ ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಸಮನ್ನಾ ಗ್ರಾಮದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕನನ್ನು ಹಾಡಹಗಲೇ ಹತ್ಯೆಗೈದಿರುವ ದುಷ್ಕರ್ಮಿಯೊಬ್ಬ, ಆತನ ರಕ್ತ ಕುಡಿದು ಮಾಂಸ ತಿನ್ನಲು ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮೃತ ಬಾಲಕನನ್ನು ಭರತ್ ವಿಶ್ವಕರ್ಮ (16) ಎಂದು ಗುರುತಿಸಲಾಗಿದೆ. ಆತ ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ವಿವರ:

ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ಭರತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಗುಡ್ಡಾ ಪಟೇಲ್ ಎಂಬಾತ ಹಿಂದಿನಿಂದ ಬಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಬಾಲಕ ಕೆಳಗೆ ಬಿದ್ದ ತಕ್ಷಣ ತನ್ನ ಬಳಿಯಿದ್ದ ಸುತ್ತಿಗೆಯಿಂದ ಸತತವಾಗಿ ಹೊಡೆದು ಸ್ಥಳದಲ್ಲಿಯೇ ಕೊಂದಿದ್ದಾನೆ.

ಬೆಚ್ಚಿಬೀಳಿಸಿದ ಪ್ರತ್ಯಕ್ಷದರ್ಶಿಗಳ ಹೇಳಿಕೆ:
ಆರೋಪಿಯು ಬಾಲಕನನ್ನು ಕೊಂದ ನಂತರ ಅಲ್ಲಿಂದ ಪರಾರಿಯಾಗದೆ, ಶವದ ಬಳಿಯೇ ನಿಂತು ರಾಕ್ಷಸನಂತೆ ವರ್ತಿಸಿದ್ದಾನೆ. ಬಾಲಕನ ತಲೆಯಿಂದ ಸೋರುತ್ತಿದ್ದ ರಕ್ತವನ್ನು ಕುಡಿದಿದ್ದಲ್ಲದೆ, ಮಾಂಸವನ್ನು ತಿನ್ನಲು ಯತ್ನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಭಗವಾನ್‌ದಾಸ್ ಪಟೇಲ್ ಎಂಬುವವರು ತಿಳಿಸಿದ್ದಾರೆ. ಈ ದೃಶ್ಯವನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಂತರ ಹೊಲಗಳತ್ತ ಓಡಿಹೋಗಲು ಯತ್ನಿಸಿದ ಆರೋಪಿಯನ್ನು ಗ್ರಾಮಸ್ಥರು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಾವುದೇ ದ್ವೇಷವಿರಲಿಲ್ಲ:
ಬಾಲಕ ಹಾಗೂ ಆರೋಪಿಯ ನಡುವೆ ಯಾವುದೇ ಜಗಳ ಅಥವಾ ಹಳೆಯ ದ್ವೇಷವಿರಲಿಲ್ಲ ಎಂದು ಬಾಲಕನ ಸಹೋದರ ವಿಜಯ್ ವಿಶ್ವಕರ್ಮ ತಿಳಿಸಿದ್ದಾರೆ. ಹಬ್ಬದ ದಿನದಂದು ಸಂಭ್ರಮದಿಂದ ಇರಬೇಕಿದ್ದ ಕುಟುಂಬ ಇದೀಗ ಶೋಕಸಾಗರದಲ್ಲಿ ಮುಳುಗಿದೆ.

ಪೊಲೀಸರ ಪ್ರತಿಕ್ರಿಯೆ ಮತ್ತು ಆರೋಪಿಯ ಹಿನ್ನೆಲೆ:
ದಮೋಹ್‌ನ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಹೆಚ್.ಆರ್. ಪಾಂಡೆ ಘಟನೆಯನ್ನು ಖಚಿತಪಡಿಸಿದ್ದಾರೆ. ಆರೋಪಿ ಗುಡ್ಡಾ ಪಟೇಲ್ ಈ ಹಿಂದೆ ತನ್ನ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದನು. ಆರೋಪಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಹಿಂಸಾತ್ಮಕ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ನಿಗಾ ಇಡುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಇಡೀ ಸಮನ್ನಾ ಗ್ರಾಮ ಈ ಘಟನೆಯಿಂದ ಬೆಚ್ಚಿಬಿದ್ದಿದ್ದು, ಮೌನ ಆವರಿಸಿದೆ.

and tries to eat flesh! drinks blood SHOCKING: Shocking act: Young man kills boy
Share. Facebook Twitter LinkedIn WhatsApp Email

Related Posts

​ಬೊಜ್ಜು, ಸಕ್ಕರೆ ಕಾಯಿಲೆ ಮತ್ತು ಹಾರ್ಟ್ ಅಟ್ಯಾಕ್: ಯಾವುದು ಮೊದಲು? ಈ ‘ಡೆಡ್ಲಿ’ ಸರಣಿ ತಪ್ಪಿಸುವುದು ಹೇಗೆ?

06/03/2026 9:39 AM2 Mins Read

BIG NEWS : ‘ಎಲ್ಲಿ ಬೇಕಾದರೂ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ’: ಹೈಕೋರ್ಟ್ ಮಹತ್ವದ ತೀರ್ಪು

06/03/2026 9:14 AM2 Mins Read

‘ಎಲ್ಲೆಂದರಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ’: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು!

06/03/2026 9:10 AM1 Min Read
Recent News

​ಬೊಜ್ಜು, ಸಕ್ಕರೆ ಕಾಯಿಲೆ ಮತ್ತು ಹಾರ್ಟ್ ಅಟ್ಯಾಕ್: ಯಾವುದು ಮೊದಲು? ಈ ‘ಡೆಡ್ಲಿ’ ಸರಣಿ ತಪ್ಪಿಸುವುದು ಹೇಗೆ?

06/03/2026 9:39 AM

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !

06/03/2026 9:29 AM

ಮಾರ್ಚ್ 6 ಈ 4 ರಾಶಿಗೆ ಅಖಂಡ ರಾಜಯೋಗ 

06/03/2026 9:19 AM

BIG NEWS : ‘ಎಲ್ಲಿ ಬೇಕಾದರೂ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ’: ಹೈಕೋರ್ಟ್ ಮಹತ್ವದ ತೀರ್ಪು

06/03/2026 9:14 AM
State News
KARNATAKA

ಮಾರ್ಚ್ 6 ಈ 4 ರಾಶಿಗೆ ಅಖಂಡ ರಾಜಯೋಗ 

By kannadanewsnow5706/03/2026 9:19 AM KARNATAKA 2 Mins Read

ಇಂದು ಮಹಾಲಕ್ಷ್ಮಿ ಜಯಂತಿ ಪ್ರಯುಕ್ತ ಮಾರ್ಚ್‌ 6 ವಿಪರೀತ ರಾಜಯೋಗ, ಈ ರಾಶಿಗೆ ಅದೃಷ್ಟ, ಸಂಪತ್ತು ಮಾರ್ಚ್ 2026ರಲ್ಲಿ ಗ್ರಹಗಳ…

SHOCKING: ಬೆಂಗಳೂರಲ್ಲಿ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಗಳಲ್ಲಿ ಪೊಲೀಸರ ದಿಢೀರ್ ತಪಾಸಣೆ: 31 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ದೃಢ

06/03/2026 9:07 AM

ರಾಜ್ಯದಲ್ಲಿ `SSLC’ ಪರೀಕ್ಷೆ : ವಿದ್ಯಾರ್ಥಿಗಳ ಭಯ ನಿವಾರಿಸಲು ‘ಸಹಾಯವಾಣಿ’ ಆರಂಭ !

06/03/2026 7:45 AM

ALERT : ಸುಟ್ಟ ಮೆಕ್ಕೆಜೋಳ ತಿನ್ನುವವರೇ ಎಚ್ಚರ : `ಕ್ಯಾನ್ಸರ್’ ತರುವ ಅಪಾಯಕಾರಿ ರಾಸಾಯನಿಕಗಳು ಪತ್ತೆ !

06/03/2026 7:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.