ಕೊಲಂಬೊ: ಹಿಂದೂ ಮಹಾಸಾಗರದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸುವ ಘಟನೆಯೊಂದರಲ್ಲಿ, ಅಮೆರಿಕಾದ ಜಲಾಂತರ್ಗಾಮಿ ದಾಳಿಗೆ ಇರಾನ್ ನ ಯುದ್ಧನೌಕೆಯೊಂದು ಸಮುದ್ರದಲ್ಲಿ ಮುಳುಗಿದೆ. ಈ ಭೀಕರ ಘಟನೆಯಲ್ಲಿ 87 ಮಂದಿ ಸಾವನ್ನಪ್ಪಿದ್ದು, ಶ್ರೀಲಂಕಾ ನೌಕಾಪಡೆಯು 32 ನಾವಿಕರನ್ನು ಯಶಸ್ವಿಯಾಗಿ ರಕ್ಷಿಸಿದೆ.
ಅಮೆರಿಕಾದ ಜಲಾಂತರ್ಗಾಮಿ ನೌಕೆಯು ಇರಾನ್ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ವರದಿಯಾಗಿದೆ. ದಾಳಿಯ ತೀವ್ರತೆಗೆ ನೌಕೆಯಲ್ಲಿದ್ದ 87 ನಾವಿಕರು ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.
ರಕ್ಷಣಾ ಕಾರ್ಯ: ಘಟನಾ ಸ್ಥಳಕ್ಕೆ ಧಾವಿಸಿದ ಶ್ರೀಲಂಕಾ ನೌಕಾಪಡೆಯು ಸಮುದ್ರದಲ್ಲಿ ಮುಳುಗುತ್ತಿದ್ದ 32 ನಾವಿಕರನ್ನು ಜೀವಂತವಾಗಿ ರಕ್ಷಿಸಿದೆ. ರಕ್ಷಿಸಲ್ಪಟ್ಟವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಈ ದಾಳಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಈ ಪ್ರದೇಶದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸೇನಾ ಪೈಪೋಟಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
This Iranian warship thought it was safe in international waters. It wasn't.
The @DeptofWar is fighting to win. 🇺🇸 pic.twitter.com/4bGMubuSQu
— The White House (@WhiteHouse) March 4, 2026








