Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಮೇಲೆ ಇಸ್ರೇಲ್ ವಾಯುಪಡೆ ಭೀಕರ ದಾಳಿ: ಇಸ್ಫಹಾನ್‌ನಲ್ಲಿನ ಕ್ಷಿಪಣಿ ಉತ್ಪಾದನಾ ಕೇಂದ್ರ ಧ್ವಂಸ!

04/03/2026 4:05 PM

ಬೆಂಗಳೂರಲ್ಲಿ MBBS ಸೀಟ್ ಕೊಡಿಸುತ್ತೇನೆಂದು ಯುವತಿಗೆ 25 ಲಕ್ಷ ವಂಚನೆ : ನಾಲ್ವರ ವಿರುದ್ಧ ‘FIR’ ದಾಖಲು!

04/03/2026 3:58 PM

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ: 101 ಮಂದಿ ನಾಪತ್ತೆ, 78 ಜನರಿಗೆ ಗಾಯ! | Submarine Attack

04/03/2026 3:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ MBBS ಸೀಟ್ ಕೊಡಿಸುತ್ತೇನೆಂದು ಯುವತಿಗೆ 25 ಲಕ್ಷ ವಂಚನೆ : ನಾಲ್ವರ ವಿರುದ್ಧ ‘FIR’ ದಾಖಲು!
KARNATAKA

ಬೆಂಗಳೂರಲ್ಲಿ MBBS ಸೀಟ್ ಕೊಡಿಸುತ್ತೇನೆಂದು ಯುವತಿಗೆ 25 ಲಕ್ಷ ವಂಚನೆ : ನಾಲ್ವರ ವಿರುದ್ಧ ‘FIR’ ದಾಖಲು!

By kannadanewsnow0504/03/2026 3:58 PM

ಬೆಂಗಳೂರು : ಬೆಂಗಳೂರಿನಲ್ಲಿ MBBS ಸೀಟ್ ಕೊಡಿಸುವುದಾಗಿ ನಂಬಿಸಿ ಯುವತಿಗೆ 25 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬನಶಂಕರಿ ಪೊಲೀಸರು ಡಾ. ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಆಯೇಷಾ ಖಥುಮ್​ ಎಂಬಾಕೆಗೆ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಡಾ.ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಶಂಶೇರ್ ಬೇಗ್, ಸೈಯದ್ ತಬ್ರೇಜ್ ಮೂಲಕ ಸಂತ್ರಸ್ತ ಯುವತಿಗೆ ಡಾ.ಶರತ್ ಪರಿಚಯವಾಗಿದ್ದು, ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಾಗಿದೆ.

ದ್ವಿತೀಯ ಪಿಯುಸಿ ಮತ್ತು NLT ಪರೀಕ್ಷೆಗಳನ್ನು ಬರೆದಿದ್ದ ಯುವತಿ MBBSಗೆ ಸೇರಿಕೊಳ್ಳುವ ಬಗ್ಗೆ ಯೋಚಿಸಿ, ಒಳ್ಳೆಯ ಕಾಲೇಜಿನಲ್ಲಿ ಸೀಟ್​​ಗಾಗಿ ಪ್ರಯತ್ನಿಸುತ್ತಿದ್ದರು. ಈ ನಡುವೆ ಪರಿಚಯದ ಸೈಯದ್‌ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು. ಈತ ತನಗೆ ಕಿಮ್ಸ್‌ ಮೆಡಿಕಲ್ ಕಾಲೇಜಿನ ಪ್ರೆಸಿಡೆಂಟ್ ಪರಿಚಯವಿರುವುದಾಗಿ ಹೇಳಿ ಡಾ. ಶರತ್ ಕೆ.ಪಿ. ಎಂಬುವವರನ್ನು ಪರಿಚಯಿಸಿದ್ದ. ಅದರಂತೆ ಬನಶಂಕರಿ 2ನೇ ಹಂತದಲ್ಲಿನ ಕಿಮ್ಸ್‌ ಮೆಡಿಕಲ್ ಕಾಲೇಜಿನಲ್ಲಿ ಶರತ್​​ನ ಭೇಟಿಯಾಗಿದ್ದರು.

ಈ ವೇಳೆ ಇದೇ ಕಾಲೇಜಿನಲ್ಲಿ ಆಯೇಷಾ ಖಥುಮ್​​ಗೆ ಸೀಟ್​​ ಕೊಡಿಸೋದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆಯಲಾಗಿತ್ತು ಎನ್ನಲಾಗಿದೆ. ನಂತರ ಇವರ ಮಾತು ನಂಬಿ ಯುವತಿ ಕಡೆಯವರು ಹಂತ ಹಂತವಾಗಿ ಯುಪಿಐ, ಚೆಕ್​​ ರೂಪದಲ್ಲಿ 10 ಲಕ್ಷ ರೂ. ಹಣ ನೀಡಿದ್ದಾರೆ. ಬಳಿಕ ಆರೋಪಿಗಳ ಡಿಮ್ಯಾಂಡ್​​ ಹಿನ್ನೆಲೆ ಉಳಿದವ 15 ಲಕ್ಷವನ್ನ ನಗದು ರೂಪದಲ್ಲಿ ನೀಡಲಾಗಿದೆ. ಪೂರ್ತಿ ಹಣ ಕೈಸೇರಿದ ಮೇಲೆ ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದು, ಮೆಡಿಕಲ್ ಸೀಟ್ ಕೊಡಿಸದೇ ವಂಚಿಸಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿದ್ದು ಅರಿತ ಯುವತಿ ಕಡೆಯವರು ಈ ಬಗ್ಗೆ ಪೊಲೀಸರ ಮೊರೆ ಹೋಗಿದ್ದಾರೆ.a

Share. Facebook Twitter LinkedIn WhatsApp Email

Related Posts

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ: 101 ಮಂದಿ ನಾಪತ್ತೆ, 78 ಜನರಿಗೆ ಗಾಯ! | Submarine Attack

04/03/2026 3:55 PM2 Mins Read

ಬಿಎಂಟಿಸಿಯಿಂದ ‘ವಜ್ರ ವಿಸ್ತಾರ’ ಸೇವೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ: ರಾಮನಗರ, ಕನಕಪುರ ಈಗ ಬೆಂಗಳೂರಿಗೆ ಮತ್ತಷ್ಟು ಹತ್ತಿರ!

04/03/2026 3:49 PM4 Mins Read

BREAKING : ಕೈಗಾರಿಕೆಗಳಿಗೆ ವಿದ್ಯುತ್ ಬಿಸಿ : ರಾಜ್ಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ವಿದ್ಯುತ್ ದರ ಏರಿಕೆ!

04/03/2026 3:32 PM2 Mins Read
Recent News

ಇರಾನ್ ಮೇಲೆ ಇಸ್ರೇಲ್ ವಾಯುಪಡೆ ಭೀಕರ ದಾಳಿ: ಇಸ್ಫಹಾನ್‌ನಲ್ಲಿನ ಕ್ಷಿಪಣಿ ಉತ್ಪಾದನಾ ಕೇಂದ್ರ ಧ್ವಂಸ!

04/03/2026 4:05 PM

ಬೆಂಗಳೂರಲ್ಲಿ MBBS ಸೀಟ್ ಕೊಡಿಸುತ್ತೇನೆಂದು ಯುವತಿಗೆ 25 ಲಕ್ಷ ವಂಚನೆ : ನಾಲ್ವರ ವಿರುದ್ಧ ‘FIR’ ದಾಖಲು!

04/03/2026 3:58 PM

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ: 101 ಮಂದಿ ನಾಪತ್ತೆ, 78 ಜನರಿಗೆ ಗಾಯ! | Submarine Attack

04/03/2026 3:55 PM

ಬಿಎಂಟಿಸಿಯಿಂದ ‘ವಜ್ರ ವಿಸ್ತಾರ’ ಸೇವೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ: ರಾಮನಗರ, ಕನಕಪುರ ಈಗ ಬೆಂಗಳೂರಿಗೆ ಮತ್ತಷ್ಟು ಹತ್ತಿರ!

04/03/2026 3:49 PM
State News
KARNATAKA

ಬೆಂಗಳೂರಲ್ಲಿ MBBS ಸೀಟ್ ಕೊಡಿಸುತ್ತೇನೆಂದು ಯುವತಿಗೆ 25 ಲಕ್ಷ ವಂಚನೆ : ನಾಲ್ವರ ವಿರುದ್ಧ ‘FIR’ ದಾಖಲು!

By kannadanewsnow0504/03/2026 3:58 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ MBBS ಸೀಟ್ ಕೊಡಿಸುವುದಾಗಿ ನಂಬಿಸಿ ಯುವತಿಗೆ 25 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.…

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ: 101 ಮಂದಿ ನಾಪತ್ತೆ, 78 ಜನರಿಗೆ ಗಾಯ! | Submarine Attack

04/03/2026 3:55 PM

ಬಿಎಂಟಿಸಿಯಿಂದ ‘ವಜ್ರ ವಿಸ್ತಾರ’ ಸೇವೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ: ರಾಮನಗರ, ಕನಕಪುರ ಈಗ ಬೆಂಗಳೂರಿಗೆ ಮತ್ತಷ್ಟು ಹತ್ತಿರ!

04/03/2026 3:49 PM

BREAKING : ಕೈಗಾರಿಕೆಗಳಿಗೆ ವಿದ್ಯುತ್ ಬಿಸಿ : ರಾಜ್ಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ವಿದ್ಯುತ್ ದರ ಏರಿಕೆ!

04/03/2026 3:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.