Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

03/03/2026 5:00 AM

ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 4:55 AM

‘ಮದ್ಯ ಪ್ರಿಯ’ರೇ ಗಮನಕ್ಕೆ: `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ ಮನೆಮದ್ದುಗಳು !

03/03/2026 4:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
KARNATAKA

ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5703/03/2026 4:55 AM

ಬೆಂಗಳೂರು : ಬಾನಂಗಳದಲ್ಲಿ ಇಂದು ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅಪರೂಪದ ಖಗೋಳ ವಿದ್ಯಮಾನವೊಂದು ಜರುಗಲಿದೆ. ಇಂದು ‘ರಕ್ತ ಚಂದ್ರಗ್ರಹಣ’ (Blood Moon) ಸಂಭವಿಸಲಿದ್ದು, ಚಂದಿರ ಕೆಂಬಣ್ಣದಲ್ಲಿ ಕಂಗೊಳಿಸಲಿದ್ದಾನೆ.

ಪಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಇಂದು ಈ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಭಾರತದಾದ್ಯಂತ ಈ ದೃಶ್ಯ ಗೋಚರಿಸಲಿದ್ದು, ಕರ್ನಾಟಕದ ಜನರಿಗೂ ಸುಮಾರು 25 ನಿಮಿಷಗಳ ಕಾಲ ಈ ಕೆಂಪು ಚಂದಿರನನ್ನು ನೋಡುವ ಅವಕಾಶ ಸಿಗಲಿದೆ.

ಗ್ರಹಣದ ಸಮಯ ಎಷ್ಟು?

ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 3ರಂದು ಗ್ರಹಣದ ಪ್ರಕ್ರಿಯೆ ಹೀಗಿರಲಿದೆ:

ಗ್ರಹಣ ಆರಂಭ: ಮಧ್ಯಾಹ್ನ 3:20ಕ್ಕೆ

ಗ್ರಹಣ ಅಂತ್ಯ: ಸಂಜೆ 6:47ಕ್ಕೆ

ಕರ್ನಾಟಕದಲ್ಲಿ ಗೋಚರತೆ: ಸರಿಸುಮಾರು 25 ನಿಮಿಷಗಳ ಕಾಲ ಗ್ರಹಣದ ಪ್ರಭಾವ ದೃಶ್ಯಮಾನವಾಗಲಿದೆ.

ಗ್ರಹಣದ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು

ಗ್ರಹಣದ ಸಮಯವನ್ನು ‘ಸೂತಕ ಕಾಲ’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಉತ್ತಮ ಎನ್ನಲಾಗುತ್ತದೆ.

ಏನು ಮಾಡಬೇಕು?

ಶುದ್ಧೀಕರಣ: ಗ್ರಹಣ ಆರಂಭಕ್ಕೆ ಮೊದಲು ಮತ್ತು ಮೋಕ್ಷದ (ಅಂತ್ಯ) ನಂತರ ಸ್ನಾನ ಮಾಡಬೇಕು. ಮನೆ ಹಾಗೂ ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು.

ಮಂತ್ರ ಪಠಣೆ: ಗ್ರಹಣದ ಅವಧಿಯಲ್ಲಿ ಧ್ಯಾನ, ಭಜನೆ ಹಾಗೂ ಕೀರ್ತನೆಗಳಲ್ಲಿ ತೊಡಗುವುದು ಒಳ್ಳೆಯದು. ವಿಶೇಷವಾಗಿ ಮಹಾಮೃತ್ಯುಂಜಯ ಮಂತ್ರ ಹಾಗೂ ಚಂದ್ರ ದೇವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬೇಕು.

ದರ್ಬೆಯ ಬಳಕೆ: ದೇವರ ವಿಗ್ರಹಗಳ ಮೇಲೆ ಗಂಗಾಜಲ ಸಿಂಪಡಿಸಿ ದರ್ಬೆಯನ್ನು ಇಡಬೇಕು. ಮನೆಯಲ್ಲಿರುವ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಮೇಲೆ ದರ್ಬೆ ಅಥವಾ ತುಳಸಿ ದಳವನ್ನು ಹಾಕಿಡುವುದರಿಂದ ಗ್ರಹಣದ ಕಿರಣಗಳ ಪ್ರಭಾವ ಇರುವುದಿಲ್ಲ ಎಂಬ ನಂಬಿಕೆಯಿದೆ.

ಏನು ಮಾಡಬಾರದು?

ಶುಭ ಕಾರ್ಯಗಳು: ಇದು ಸೂತಕದ ಸಮಯವಾದ್ದರಿಂದ ಮದುವೆ, ಗೃಹಪ್ರವೇಶ, ಹೊಸ ವಾಹನ ಖರೀದಿ ಅಥವಾ ಹೊಸ ಉದ್ಯೋಗ ಆರಂಭದಂತಹ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

ಆಹಾರ ನಿಯಮ: ಗ್ರಹಣದ ಅವಧಿಯಲ್ಲಿ ಆಹಾರ ತಯಾರಿಸುವುದು ಹಾಗೂ ಸೇವಿಸುವುದು ನಿಷಿದ್ಧ.

ಗರ್ಭಿಣಿಯರ ಜಾಗ್ರತೆ: ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬರಬಾರದು ಎಂದು ಹಿರಿಯರು ಸಲಹೆ ನೀಡುತ್ತಾರೆ.

ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರಿನ ಪ್ರಮುಖ ದೇವಾಲಯಗಳ ವಿವರ:

ಬನಶಂಕರಿ ದೇವಾಲಯ: ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7 ಗಂಟೆಯ ನಂತರವಷ್ಟೇ ನಿತ್ಯ ಪೂಜೆಗಳು ಪುನಾರಂಭಗೊಳ್ಳಲಿವೆ.

ಗವಿಗಂಗಾಧರೇಶ್ವರ ದೇವಾಲಯ: ಬೆಳಿಗ್ಗೆ 9 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುವುದು. ಸಂಜೆ 7.45ರ ನಂತರ ದರ್ಶನಕ್ಕೆ ಅವಕಾಶವಿದ್ದು, ಮಾರ್ಚ್ 4ರಂದು ‘ಗ್ರಹಣ ಶಾಂತಿ ಹೋಮ’ ನಡೆಯಲಿದೆ.

ಕಾಡುಮಲ್ಲೇಶ್ವರ ದೇವಾಲಯ: ಬೆಳಿಗ್ಗೆ 11 ಗಂಟೆಗೆ ಬಾಗಿಲು ಮುಚ್ಚಲಿದ್ದು, ರಾತ್ರಿ 7.30ಕ್ಕೆ ಪುನಃ ತೆರೆಯಲಾಗುವುದು. ಮರುದಿನ ನವಗ್ರಹ ಶಾಂತಿ ಹೋಮ ಆಯೋಜಿಸಲಾಗಿದೆ.

ದೊಡ್ಡ ಗಣಪತಿ ದೇವಾಲಯ: ಗ್ರಹಣ ಮೋಕ್ಷವಾದ ನಂತರ ಅಂದರೆ ರಾತ್ರಿ 7.45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಿದೆ.

ಬಂಡೆ ಮಹಾಕಾಳಿ ದೇವಾಲಯ (ವಿಶೇಷ): ಇಲ್ಲಿ ಗ್ರಹಣದ ಅವಧಿಯಲ್ಲೂ ದೇವಾಲಯ ತೆರೆದಿರುತ್ತದೆ. ಈ ಸಮಯದಲ್ಲಿ ದೇವಿಗೆ ತುಪ್ಪದ ಲೇಪನ ಮಾಡಿ ವಿಶೇಷ ಹೋಮ ನಡೆಸಲಾಗುವುದು. ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶವಿದೆ.

ರಾಜ್ಯದ ಇತರ ಪ್ರಮುಖ ಕ್ಷೇತ್ರಗಳ ಮಾಹಿತಿ:

ಶ್ರೀ ಕ್ಷೇತ್ರ ಧರ್ಮಸ್ಥಳ:

ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಮಾರ್ಚ್ 3ರ ಮಂಗಳವಾರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ: 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ.

ಮಧ್ಯಾಹ್ನ: 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತ.

ರಾತ್ರಿ: 7.30 ಗಂಟೆಯ ನಂತರ ಎಂದಿನಂತೆ ದರ್ಶನ ಲಭ್ಯವಿರುತ್ತದೆ.

ಚಾಮುಂಡೇಶ್ವರಿ ದೇವಾಲಯ, ಮೈಸೂರು:
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣದ ನಂತರ ಗರ್ಭಗುಡಿ ಶುದ್ಧೀಕರಣ ಕಾರ್ಯಗಳು ನೆರವೇರಲಿವೆ.

ಗಮನಿಸಿ: ಗ್ರಹಣವು ಮಧ್ಯಾಹ್ನ 3.10 ಕ್ಕೆ ಆರಂಭವಾಗಿ ಸಂಜೆ 6.47 ಕ್ಕೆ ಮುಕ್ತಾಯವಾಗಲಿದೆ. ದೂರದ ಊರುಗಳಿಂದ ಬರುವ ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸವನ್ನು ಯೋಜಿಸಲು ದೇವಸ್ಥಾನದ ಆಡಳಿತ ಮಂಡಳಿಗಳು ವಿನಂತಿಸಿವೆ.

Today's Ketugrastha lunar eclipse: Here is complete information about the visibility time and Sutaka period in Karnataka
Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

03/03/2026 5:00 AM2 Mins Read

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

02/03/2026 8:42 PM1 Min Read

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM1 Min Read
Recent News

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

03/03/2026 5:00 AM

ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 4:55 AM

‘ಮದ್ಯ ಪ್ರಿಯ’ರೇ ಗಮನಕ್ಕೆ: `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ ಮನೆಮದ್ದುಗಳು !

03/03/2026 4:45 AM

Liquid Jaggery: ಸಕ್ಕರೆಗಿಂತ 10 ಪಟ್ಟು ಶಕ್ತಿಶಾಲಿ ಈ ಜೋನಿ ಬೆಲ್ಲ; ಇದರ ಅದ್ಭುತ ಪ್ರಯೋಜನ ಏನು ಗೊತ್ತೇ?

03/03/2026 4:22 AM
State News
KARNATAKA

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

By kannadanewsnow5703/03/2026 5:00 AM KARNATAKA 2 Mins Read

ಬೆಂಗಳೂರು: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುದಿನಗಳಿಂದ…

ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 4:55 AM

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

02/03/2026 8:42 PM

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.