ಬೆಂಗಳೂರು: ನಗರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ನೀರಿನ ಸಂಪು ಸ್ವಚ್ಥಗೊಳಿಸೋದಕ್ಕೆ ಇಳಿದಂತ ಸಂದರ್ಭದಲ್ಲಿ ಮೂವರು ಉಸಿರುಗಟ್ಟಿ ಅಸ್ವಸ್ಥಗೊಂಡು, ಆ ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿರುವಂತ ಘಟನೆ ವೈಟ್ ಫೀಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೀರಿನ ಸಂಪು ಸ್ವಚ್ಛಗೊಳಿಸೋದಕ್ಕೆ ಮಾಲೀಕರಾದಂತ ಮುನಿಶಾಮಪ್ಪ(67) ಎಂಬವರು ಇಳಿದಿದ್ದರು. ಅವರು ಸ್ವಚ್ಛಗೊಳಿಸಲು ತಂದಂತ ಕೆಲವು ರಾಸಾಯನಿಕದಿಂದ ಉಸಿರುಗಟ್ಟಿ ಸಂಪಿನೊಳಗೆ ಮೂರ್ಛೆ ಬಿದ್ದಿದ್ದರು. ಇದನ್ನು ಗಮನಿಸಿದಂತ ರುದ್ರ ಕುಮಾರ್(40) ಎಂಬವರು ರಕ್ಷಣೆಗೆ ತೆರಳಿ ಅವರು, ಉಸಿರುಗಟ್ಟಿ ಮೂರ್ಛೆ ಹೋಗಿದ್ದರು. ಆ ಬಳಿಕ ವಿಶ್ವನಾಥ್ ಆಚಾರಿ(24) ಎಂಬುವರು ರಕ್ಷಣೆಗೆ ಹೋಗಿ ಅವರು ಪ್ರಜ್ಞೆ ತಪ್ಪಿದ್ದರು.
ಅಸ್ವಸ್ಥಗೊಂಡಿದ್ದಂತ ಮೂವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲು ಕೊಂಡೊಯ್ಯುವ ವೇಳೆಯಲ್ಲಿ ಮಾರ್ಗಮಧ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ವೈದೇಹಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ








