ಕತಾರ್: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡ ಬೆನ್ನಲ್ಲೇ, ಮುಂಜಾಗ್ರತಾ ಕ್ರಮವಾಗಿ ಕತಾರ್ ನಲ್ಲಿ ಇರುವಂತ ಎಲ್ಲಾ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಯುಎಇ ರಕ್ಷಣಾ ಸಚಿವಾಲಯವು ಇಂದು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಗೆ ಯುಎಇ ಗುರಿಯಾಗಿದೆ ಎಂದು ಘೋಷಿಸಿತು, ಇದನ್ನು ಯುಎಇ ವಾಯು ರಕ್ಷಣಾ ಪಡೆಗಳು ಹೆಚ್ಚಿನ ದಕ್ಷತೆಯೊಂದಿಗೆ ನಿಭಾಯಿಸಿದವು ಮತ್ತು ಹಲವಾರು ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಯಿತು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಮತ್ತೊಂದೆಡೆ ಕತಾರ್ ನಾಗರೀಕ ವಿಮಾನಯಾನ ಪ್ರಾಧಿಕಾರವು ತಾತ್ಕಾಲಿಕವಾಗಿ ಎಲ್ಲಾ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.








