Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಇಸ್ರೇಲ್‌ನಲ್ಲಿ ರಾರಾಜಿಸಲಿದ್ದಾನೆ ಶಿವಾಜಿ ಮಹಾರಾಜ: ಮಹಾನ್ ನಾಯಕನ ಪ್ರತಿಮೆ ನಿರ್ಮಿಸಲು ಸಿದ್ಧತೆ!

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ
KARNATAKA

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ

By kannadanewsnow57

ಬೆಂಗಳೂರು : ಸರ್ವೊಚ್ಚ ನ್ಯಾಯಾಲಯದ (ಸುಪ್ರಿಂ ಕೋರ್ಟ) ಅಂಗಳ ತಲುಪಿದ ಯಾವುದೇ ಬಗೆಯ ವ್ಯಾಜ್ಯಗಳ ಪರಿಹಾರಕ್ಕಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸರ್ವೋಚ್ಛ ನ್ಯಾಯಾಲಯವು ವಿಶೇಷ ಅಭಿಯಾನ ಹಮ್ಮಿಕೊಂಡಿದೆ ಎಂದು ಹೈಕೋರ್ಟನ ನ್ಯಾಯಮೂರ್ತಿ ಗೌರವಾನ್ವಿತ ಅನು ಶಿವರಾಮ್ ಅವರು ಹೇಳಿದರು.

ಬೆಂಗಳೂರಿನ ಹೈಕೋರ್ಟ ಸಭಾಂಗಣದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಆಗಸ್ಟ್ 21, 22 ಮತ್ತು 23ರಂದು ಅಭಿಯಾನ ನಡೆಯಲಿದ್ದು, ರಾಜ್ಯದ ಯಾವುದೇ ಭಾಗದಲ್ಲಿನ ಪಕ್ಷಗಾರರು ತಾವು ಇರುವ ಸ್ಥಳದಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ವ್ಯಾಜ್ಯ ಪರಿಹಾರ ಮಾಡಿಕೊಳ್ಳಬಹುದು. ಪಕ್ಷಗಾರರಿಬ್ಬರು ಒಂದೆಡೆ ಸೇರಿ ವ್ಯಾಜ್ಯ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಅಭಿಯಾನ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲಿ ಈಗಾಗಲೇ 4328 ಕೇಸಗಳನ್ನು ಗುರುತಿಸಿದ್ದೇವೆ. ಜನತೆಯ ಸಮಯ ಮತ್ತು ಖರ್ಚು ವೆಚ್ಚ ಉಳಿಸಬೇಕು ಎಂದು ಯೋಜಿಸಿ ಅಭಿಯಾನ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟನ ನ್ಯಾಯಮೂರ್ತಿಗಳಾದ ಆರ್ ದೇವದಾಸ್ ಅವರು ಮಾತನಾಡಿ, ಈ ಅಭಿಯಾನ ಸರ್ವೊಚ್ಚ ನ್ಯಾಯಾಲಯದ ಐತಿಹಾಸಿಕ ಪ್ರಥಮ ಪ್ರಯತ್ನವಾಗಿದೆ. ಬಹುವರ್ಷಗಳಿಂದ ನ್ಯಾಯಕ್ಕೆ ಕಾಯುತ್ತಿರುವ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಉದ್ದೇಶಿಸಿ ಸರ್ವೋಚ್ಚ ನ್ಯಾಯಾಲಯವು ದಿಟ್ಟ ಹೆಜ್ಜೆ ಇಟ್ಟು ವ್ಯಾಜ್ಯ ವಿಲೇವಾರಿ ವಿಶೇಷ ಅಭಿಯಾನ (ಸ್ಪೆಷಲ್ ಡ್ರೈವ್) ಹಮ್ಮಿಕೊಂಡಿದೆ. ಸುಪ್ರೀಂಕೋರ್ಟನಲ್ಲಿರುವ ವ್ಯಾಜ್ಯಗಳ ಪರಿಹಾರಕ್ಕಾಗಿ ಮಾತ್ರ ಈ ಅಭಿಯಾನ ಹಮ್ಮಿಕೊಂಡಿದೆ. ಸುಪ್ರಿಂ ಕೋರ್ಟನಲ್ಲಿ ನಿಮ್ಮ ನಿಮ್ಮ ಕೇಸ್ ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು ಇದೊಂದು ಸದವಕಾಶ ಎಂದು ಸಾರ್ವಜನಿಕರಿಗೆ ಸಂದೇಶ ಹೋಗಬೇಕು. ಈ ಅಭಿಯಾನದ ಸಂದೇಶವು ರಾಜ್ಯದ ಜನತೆಗೆ ತಲುಪಬೇಕು. ಜನತೆಗೆ ಸಹಾಯ ಆಗಬೇಕು ಎಂಬುದು ನಮ್ಮ ಪ್ರಾರ್ಥನೆಯಾಗಿದೆ ಎಂದು ಅವರು ತಿಳಿಸಿದರು.

ಆಯಾ ಜಿಲ್ಲೆಗಳಲ್ಲಿ ಆಗಸ್ಟ್ 21ರಿಂದ ಮೂರು ದಿನಗಳ ಕಾಲ ಆಯಾ ಜಿಲ್ಲೆಯ ಪ್ರಧಾನ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ವ್ಯಾಜ್ಯ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ಅಗತ್ಯ ಏರ್ಪಾಡು ಮಾಡಲಿದ್ದಾರೆ. ನಾನು ನನ್ನ ಕೇಸನ್ನು ಬಗೆ ಹರಿಸಿಕೊಳ್ಳಲು ಇಚ್ಚಿಸಿದ್ದೇನೆ ಎಂದು ಪಕ್ಷಗಾರರು ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿದಲ್ಲಿ ವ್ಯಾಜ್ಯ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಈ ವಿಷಯದಲ್ಲಿ ವಕೀಲರು ಅಡ್ಡಿ ಪಡಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಹಾಗೂ ಇತರರು ಇದ್ದರು.

Historic step towards resolution of Supreme Court disputes: Special campaign for three days from August 21
Share. Facebook Twitter LinkedIn WhatsApp Email

Related Posts

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

2 Mins Read

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

2 Mins Read

ಕೃಷಿ ಜಮೀನಿನಲ್ಲಿ ಮನೆ ಕಟ್ಟುವ ಮುನ್ನ ಈ ನಿಯಮ ತಿಳಿಯಲೇಬೇಕು! ತಪ್ಪಿದರೆ ಭಾರೀ ದಂಡ, ಕಾನೂನು ಸಂಕಷ್ಟ ಗ್ಯಾರಂಟಿ

2 Mins Read
Recent News

​ಇಸ್ರೇಲ್‌ನಲ್ಲಿ ರಾರಾಜಿಸಲಿದ್ದಾನೆ ಶಿವಾಜಿ ಮಹಾರಾಜ: ಮಹಾನ್ ನಾಯಕನ ಪ್ರತಿಮೆ ನಿರ್ಮಿಸಲು ಸಿದ್ಧತೆ!

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

State News
KARNATAKA

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

By kannadanewsnow57 KARNATAKA 2 Mins Read

ಮೂತ್ರಪಿಂಡಗಳು (ಕಿಡ್ನಿಗಳು) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು, ರಕ್ತವನ್ನು ಶುದ್ಧೀಕರಿಸುವುದು ಹಾಗೂ…

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

ಕೃಷಿ ಜಮೀನಿನಲ್ಲಿ ಮನೆ ಕಟ್ಟುವ ಮುನ್ನ ಈ ನಿಯಮ ತಿಳಿಯಲೇಬೇಕು! ತಪ್ಪಿದರೆ ಭಾರೀ ದಂಡ, ಕಾನೂನು ಸಂಕಷ್ಟ ಗ್ಯಾರಂಟಿ

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘KSRTC’ ಉಚಿತ ಬಸ್ ಪಾಸ್ ಅರ್ಜಿ ಸಲ್ಲಿಕೆಗೆ ಹೊಸ ನಮೂನೆ ಬಿಡುಗಡೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.