ಚಿತ್ರದುರ್ಗ: 8 ವರ್ಷದಿಂದ ಪ್ರೀತಿಸಿ ಪ್ರೇಯಸಿಗೆ ವಂಚನೆಗೆ ಯತ್ನಿಸಿದಂತ ಶಿಕ್ಷಕರನನ್ನು ಲಾಕ್ ಮಾಡಲಾಗಿದೆ. ಪೊಲೀಸರೇ ಮುಂದೆ ನಿಂತು ಪ್ರೇಯಸಿಗೆ ಶಿಕ್ಷಕನಿಂದ ತಾಳಿ ಕಟ್ಟಿಸಿದಂತ ಘಟನೆ ಚಿತ್ರದುರ್ಗದ ಭರಮಸಾಗರದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕನಾಗಿದ್ದಂತ ತಣಿಗೆಹಳ್ಳಿಯ ಹರೀಶ್ ಹಾಗೂ ಇಸಾಮುದ್ರ ಗೊಲ್ಲರಹಟ್ಟಿಯ ಕಾವ್ಯ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೇ ಕೆಲ ದಿನಗಳಿಂದ ಶಿಕ್ಷಕ ಹರೀಶ್ ಅವರು ಕಾವ್ಯಾಗೆ ವಂಚಿಸಿ, ಬೇರೊಂದು ಯುವತಿಯೊಂದಿಗೆ ಮದುವೆಯಾಗೋದಕ್ಕೆ ಪ್ಲಾನ್ ಮಾಡಿದ್ದನು.
ಇಂದು ಕೋಪದಲ್ಲೇ ಶಿಕ್ಷಕ ಹರೀಶ್ ಬಳಿಗೆ ತೆರಳಿದಂತ ಕಾವ್ಯಾ, ಮದುವೆ ಆಗುತ್ತಿಯೋ ಇಲ್ಲವೋ ಎಂಬುದಾಗಿ ಜಗಳ ಮಾಡಿದ್ದಾರೆ. ಈ ಜಗಳ ಭರಮಸಾಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ವೇಳೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ, ಭರಮಸಾಗರ ಠಾಣೆಯ ಬಳಿಯ ದೇವಸ್ಥಾನದಲ್ಲೇ ಕಾವ್ಯಾಗೆ ಮದುವೆ ಮಾಡಲಾಗಿದೆ. ಹರೀಶ್ ಅವರು ಕಾವ್ಯಾ ಕುತ್ತಿಗೆಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.
ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ
ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ?: ಪ್ರಕರಣ ದಾಖಲಿಸದೇ NCR ಮಾಡಿ ಕೈತೊಳೆದುಕೊಂಡ್ರ ಪೊಲೀಸರು?








