ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಮಾರಾಟವಾಗುತ್ತಿದೆ ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದವು. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಕೆಳಗಿನಂತೆ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟವಾಗುತ್ತಿದೆ ಎಂಬುದು ಸುಳ್ಳು. ಆ ರೀತಿಯ ಯಾವುದೇ ಪೂರಕ ಪುರಾವೆಗಳು ಇರೋದಿಲ್ಲ. ಇದು ತಪ್ಪು ಮಾಹಿತಿ. ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸೋ ಹುನ್ನಾರವಾಗಿದೆ. ಇಂತಹ ಸುಳ್ಳು ಸುದ್ದಿ ಹರಡೋರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವದಾಗಿ ತಿಳಿಸಿದೆ.
ಸಾರ್ವಜನಿಕರು, ಮಕ್ಕಳ ಪಾಲಕ-ಪೋಷಕರು, ವಿದ್ಯಾರ್ಥಿಗಳು ಇವುಗಳಿಗೆ ಕಿವಿಗೊಡಬಾರದು. ವಿದ್ಯಾರ್ಥಿಗಳು ಪರೀಕ್ಷೆಯ ಕಾರಣ ವ್ಯಾಸಂಗದ ಕಡೆಗೆ ಗಮನ ಕೇಂದ್ರೀಕರಿಸಿ. ಪೋಷಕರು ಅವರಿಗೆ ಪ್ರೋತ್ಸಾಹಿಸಿ ಎಂದಿದೆ.
ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ kseab.karnataka.gov.in ಜಾಲತಾಣದಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಿರುವಂತ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಎಂಬುದಾಗಿ ತಿಳಿಸಿದೆ.
ಇದಷ್ಟೇ ಅಲ್ಲದೇ ಪ್ರಶ್ನೆಪತ್ರಿಕೆಯ ಬ್ಲೂ ಪ್ಲಿಂಟ್ ಅಂದರೆ ವಿಷಯವಾರು ಅಧ್ಯಯವಾರು ಅಂಕಗಳ ಹಂಚಿಕೆಯ ಮಾಹಿತಿ ನೀಡಲಾಗಿದೆ. ಸಮಗ್ರ ಪ್ರಶ್ನೆ ಕೋಠಿ ( ಶೇ.70ರಿಂದ 75 ಪ್ರಶ್ನೆಗಳು ಇದರಿಂದಲೇ ಬರುತ್ತವೆ ಎಂದು ಹೇಳಿದೆ. ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಮಾದರಿ ಉತ್ತರಗಳು, ಹಿಂದಿನ ವರ್ಷದ ಶೇಕಡಾ 100 ಅಂಕ ಪಡೆದ ಉತ್ತರ ಪತ್ರಿಕೆಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂಬುದಾಗಿ ಹೇಳಿದು.
BREAKING: ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ಕರ್ನಾಟಕ ರಾಜ್ಯಪಾಲರು ಅಂಕಿತ
ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್: ಮಂಡ್ಯ ಡಿಸಿ








