ಚೈನ್ನೈ : ಚೆನ್ನೈನಿಂದ ಸಿಂಗಾಪುರಕ್ಕೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ವಿಳಂಬ ಉಂಟಾಗಿದೆ. ಇಂಡಿಗೋ ವಿಮಾನದ ಒಳಗೆ 5 ಗಂಟೆಗಳ ಕಾಲ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ವಿಮಾನದ ಕ್ಯಾಬಿನ್ ನಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಸಮಸ್ಯೆ ಉಂಟಾಗಿದೆ.
ಸುಮಾರು ಐದು ಗಂಟೆಗಳ ಕಾಲ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ನಿಂತಿತ್ತು. ನಿಗದಿತ ಸಮಯಕ್ಕೆ ವಿಮಾನ ತೆರಳದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಏರ್ಪೋರ್ಟ್ ನಲ್ಲಿಯೇ ಇಂಡಿಗೋ ವಿಮಾನ ನಿಂತಿದೆ. ಇಂಡಿಗೋ ಏರ್ಲೈನ್ಸ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








