ಬೆಂಗಳೂರು: ನಗರದ ಸಾಮರ್ ಇಂಟರ್ ನ್ಯಾಷನರ್ ಇಸ್ಲಾಮಿಕ್ ಶಾಲೆಯಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ರಾಷ್ಟ್ರದ ಏಕತೆಗೆ ಭಂಗ ಬರುವಂತ ಚಟುವಟಿಕೆಗಳು ನಡೆಯುತ್ತಿವೆ ಎಂಬುದಾಗಿ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದನು. ಈ ದೂರು ಆಧರಿಸಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಈ ಸಂಬಂಧ ಆದೇಶ ಹೊರಡಿಸಿರುವಂತ ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕರು, ಬೆಂಗಳೂರಿನ ಅಬ್ದುಲ್ ರಹೀಮ್ ಅವರ ಪುತ್ರ ಅಬ್ದುಲ್ ರಜಾಕ್ ಸಾಮರ್ ಇಂಟರ್ ನ್ಯಾಷನರ್ ಇಸ್ಲಾಮಿಕ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಅವರು ವ್ಯಾಸಂಗ ಮಾಡುತ್ತಿರುವಂತ ಸಾಮರ್ ಇಂಟರ್ ನ್ಯಾಷನರ್ ಇಸ್ಲಾಮಿಕ್ ಶಾಲೆಯಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿರುವಂತ ಅವ್ಯವಹಾರಗಳ ಬಗ್ಗೆ ಸೂಕ್ತ ಕ್ರಮಕ್ಕೆ ಪತ್ರದಲ್ಲಿ ಕೋರಿದ್ದಾರೆ ಎಂದಿದ್ದಾರೆ.
ದಿನಾಂಕ 24-11-2019ರಲ್ಲಿ ಯೂಟ್ಯೂಬ್ ಚಾನಲ್ ನಲ್ಲಿ ಮುಸ್ಲೀಂ ಜನಾಂಗದವರ ಚರಿತ್ರೆಯನ್ನು ವಿವರಿಸುವ ಸಂದರ್ಭದಲ್ಲಿ ರಾಷ್ಟ್ರವನ್ನು ಮುಸಲ್ಮಾನ್ ಆಡಳಿತಕ್ಕೆ ಒಳಪಡಿಸಬೇಕಾದ ಅತ್ಯಗತ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೇ ಚರ್ಚೆಗೆ ಒಳಪಡಿಸುವಂತೆಯೂ ವಿಷಯವ್ನು ಜಾಮಿಯ ಮೊಹಮ್ಮದೀಯ ಮನ್ಸೂರ ಎಜುಕೇಷನ್ ಸೊಸೈಟಿ ಮಾಡಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ದಿನಾಂಕ 07-02-2023ರಂದು ಶಾಲೆಯಲ್ಲಿ ನಡೆದಂತ ಸಮಾವೇಶದಲ್ಲಿ ನಾಸಿಕ್ ನಿಂದ ಬಂದಂತ ಮುಖ್ಯ ಶಿಕ್ಷಕಿ ನಾಜಿಯ ಅನ್ಸಾರಿ ಅವರು, ಯಾವ ಪ್ರಕಾರ ಮನುಷ್ಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ. ಟ್ರಸ್ಟ್ ಕಟ್ಟಡದಲ್ಲಿ ಆಗಾಗ ರಾಷ್ಟ್ರದ ಏಕತೆಗೆ ಭಂಗ ತರುವಂತ ವಿಷಯಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಕಾಶ್ಮೀರದಿಂದ ಬಂದ ವಿದ್ಯಾರ್ಥಿಯೊಬ್ಬ ದಿನಾಂಕ 25-04-2024ರಲ್ಲಿ ಕೊತ್ತನೂರು ಪೊಲೀಸ್ ಠಾಣೆಗೆ ಸಲ್ಲಿಸಿದಂತ ದೂರಿನ ಪ್ರತಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಸಾಮರ್ ಶಾಲೆಯಲ್ಲಿ ನಡೆಯುತ್ತಿರುವಂತ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಉಲ್ಲೇಖಿಸಲಾಗಿದೆ. ಈ ಎಲ್ಲವನ್ನು ಪರಿಶೀಲಿಸಿ, ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೋದಕ್ಕೆ ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣದ ನಿರ್ದೇಶಕರು ಸೂಚಿಸಿದ್ದಾರೆ.









