ಮಂಡ್ಯ : ರಾಜ್ಯದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಕಾಲಿನ ಮೇಲೆ ಸೈಜ್ ಗಲ್ಲು ಎತ್ತಿ ಹಾಕಿ ಕ್ರೌರ್ಯ ಮೆರೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರಣಾಂತಿಕ ಹಲ್ಲೆಗೆ ಯುವತಿಯ ಲವ್ ಮ್ಯಾರೇಜ್ ಇದೀಗ ಕಾರಣವಾಗಿದೆ ಎನ್ನುವ ವಿಚಾರ ಬಹಿರಂಗವಾಗಿದೆ.
ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಈ ಒಂದು ಹಲ್ಲೆ ನಡೆದಿದೆ. ಮೊನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಹಳ್ಳಿ ಈ ಒಂದು ಹಲ್ಲೆ ನಡೆದಿದೆ. ಬೊಮ್ಮಲಾಪುರ ಗ್ರಾಮದ ನಿವಾಸಿಗಳ ಆದ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು, ನಿಂಗಣ್ಣ ಮತ್ತು ಪಟಾಲಮ್ಮನಿಂದ ಈ ಒಂದು ದೌರ್ಜನ್ಯ ನಡೆದಿತ್ತು. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಈ ಹಿಂದೆ ಅದೇ ಊರಿನ ನಿಂಗಣ್ಣ ಎಂಬುವವರ ಪುತ್ರಿ ನಾಪತ್ತೆಯಾಗಿದ್ದಳು.
ಬಳಿಕ ಪ್ರೀತಿಸಿದ ಹುಡುಗನೊಂದಿಗೆ ಯುವತಿ ಮದುವೆಯಾಗಿದ್ದಳು. ಲವ್ ಮ್ಯಾರೇಜ್ ಆಗಲು ಪ್ರಕಾಶ್ ಸಹಾಯ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಕಾಶ್ ಮೇಲೆ ಯುವತಿಯ ತಂದೆ ಹಾಗೂ ಸಹೋದರನಿಗೆ ಸಿಟ್ಟು ಇತ್ತು. ಹಾಗಾಗಿ ಪ್ರಕಾಶ್ ಮೇಲೆ ಫೆಬ್ರವರಿ 22ಕ್ಕೆ ಪ್ರಕಾಶ್ ನವೀನ್ ಮೇಲೆ ಸಂಜು ಟೀಮ್ ಅಟ್ಯಾಕ್ ಮಾಡುತ್ತೆ. ಅಟ್ಟಾಡಿಸಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಸಂಜು ಮತ್ತು ಗಿರೀಶ್ ಎನ್ನುವವರು ಪ್ರಕಾಶ್ ಬಾಮೈದ ನವೀನ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕಾಲನ್ನು ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದಾರೆ. ಈಗಾಗಲೇ ಪ್ರಮುಖ ಆರೋಪಿ ಗಿರೀಶನ್ನು ಅರೆಸ್ಟ್ ಮಾಡಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








