ತುಮಕೂರು : ತುಮಕೂರಿನಲ್ಲಿ ಸಿನಿಮೀಯ ರೀತಿ ದರೋಡೆ ಪ್ರಕರಣ ಒಂದು ನಡೆದಿದ್ದು, ಚಿನ್ನದ ಅಂಗಡಿ ದರೋಡೆ ಮಾಡಿದ್ದವರ ಬಂಧನಕ್ಕೆ ಹೆದ್ದಾರಿಯೇ ಬಂದ್ ಮಾಡಲಾಗಿದೆ. ತಾವರೆಕೆರೆಯಲ್ಲಿ ಬ್ಯಾರಿಕೆಡ್ ಅಳವಡಿಸಿ ಹೆದ್ದಾರಿಯಲ್ಲಿ ಬಂದ್ ಮಾಡಿದ್ದಾರೆ.
ಹೆದ್ದಾರಿ ಯಾವಾಗ ಬಂದ್ ಆಗುತ್ತೋ ತಕ್ಷಣ ದರೋಡೆಕೋರರು ತಮ್ಮ ಬೊಲೆರೋ ಕಾರನ್ನು ವಾಪಸ್ ತಿರುಗಿಸಿದ್ದಾರೆ. ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಪೊಲೀಸರ ಕೈಗೂ ಸಿಗದೇ ಎಸ್ಕೇಪ್ ಆಗಿದ್ದಾರೆ. ಆದರೆ ಸ್ಥಳೀಯರು ಈ ಒಂದು ದರಡೆ ಕೋರರ ಬೆನ್ನು ಬಿದ್ದಿದ್ದಾರೆ ಒಂದು ರೀತಿಯ ಸಿನಿಮಾ ರೀತಿಯ ಶೈಲಿಯಲ್ಲಿ ಕಳ್ಳರನ್ನು ಚೇಸಿಂಗ್ ಮಾಡಿದ್ದಾರೆ.
ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ರೋಚಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ ಕೃತೇ ನಡೆದ ಕೆಲವೇ ಗಂಟೆಗಳಲ್ಲಿ ದರೋಡೆಕೋರರನ್ನು ಬಂಧಿಸಲಾಗಿದೆ. ಆದರೆ ಹೆದ್ದಾರಿ ಬಳಿಯೇ ಬೋಲೇರೋ ವಾಹನ ಬಿಟ್ಟು ಕಾಡಿನಲ್ಲಿ ಪರಾರಿಯಾಗಿದ್ದಾರೆ ಆದರೆ ಪೊಲೀಸರು ಕಾಡಿನಲ್ಲಿ ಕೋಂಬಿಂಗ್ ಕಾರ್ಯಚರಣೆ ನಡೆಸಿ ಮೂರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ದರೋಡೆ ಮಾಡಿ ಬೃಹತ್ ಮರದ ಬುಡದಲ್ಲಿ ಇಟ್ಟಿದ ಚಿನ್ನದ ಸಮೇತ ಮೂವರು ಕಳ್ಳರು ಲಾಕ್ ಆಗಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








