ಹಾಸನ : ಬಿಜೆಪಿ ಮುಖಂಡ ದೇವರಾಜೆಗೌಡನಿಂದ ಕಿರುಕುಳ ಆರೋಪ ಹಾಸನದಲ್ಲಿ ವಿಷ ಸೇವಿಸಿ ಮಹಿಳೆ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಹಿಳೆಯನ್ನ ಹಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದೀಗ ಅಸ್ವಸ್ಥ ಮಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೊಳೆನರಸೀಪುರ ಮೂಲದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿನ್ನೆ ಮಧ್ಯಾಹ್ನ 12:30ಕ್ಕೆ ವಿಷ ಸೇವಿಸಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಿ ವೈದ್ಯರು ಅದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ದೇವರಾಜೇಗೌಡ ಸುದ್ದಿಗೋಷ್ಠಿಯಲ್ಲಿ ನನಗೆ ಅವಮಾನ ಮಾಡಿದ್ದಾರೆ. ನಾನು ಜೈಲಿಗೆ ಹೋಗಿದ್ದಾಗಿ ಹೇಳಿದರೆ ಸಮಾಜದಲ್ಲಿ ಅವಮಾನ ಆಗುತ್ತಿದೆ. ಹಾಗಾಗಿ ವಿಷಯ ಸೇವಿಸಿದ್ದೇನೆ ಎಂದು ಅಸ್ವಸ್ಥ ಮಹಿಳೆ ಹೇಳಿದ್ದಾರೆ.
ಈ ಹಿಂದೆ ವಕೀಲ ದೇವರಾಜೇಗೌಡ ವಿರುದ್ಧ ಮಹಿಳೆ ದೂರು ನೀಡಿದ್ದರು. ಹನಿಟ್ರ್ಯಪ್ ಆರೋಪ ಮಾಡಿದ್ದ ವಕೀಲ ದೇವರಾಜೇಗೌಡ. ತನ್ನ ವಿರುದ್ಧ ದೂರು ನೀಡಿದ ಮಹಿಳೆಯ ವಿರುದ್ಧ ಈ ಒಂದು ಆರೋಪ ಮಾಡಿದ್ದರು. ಸದ್ಯ ದೇವರ ದೇವರಾಜೇಗೌಡ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ. ಮಹಿಳೆಯ ಹೇಳಿಕೆ ಆಧರಿಸಿ ಪೊಲೀಸರು ಇದೀಗ ಕ್ರಮಕ್ಕೆ ಮುಂದಾಗಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








