ಉಡುಪಿ : ಉಡುಪಿಯಲ್ಲಿ ಪ್ರಚೋದನೆಯಿಂದ ಬಾಲಕನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಅಪ್ರಾಪ್ತ ಬಾಲಕನೊಬ್ಬ ಇಲ್ಲಿನ ಸಲೂನೊಂದರಲ್ಲಿ ಪಾಕಿಸ್ತಾನ ಪರ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
11ರ ಹರೆಯದ ಬಾಲಕ ಬಿಹಾರದಿಂದ ಬಂದ ವಲಸೆ ಕಾರ್ಮಿಕನ ಮಗನಾಗಿದ್ದು, ಹೇರ್‌ಕಟಿಂಗ್ ಮಾಡಿಸಲೆಂದು ಸಲೂನ್‌ಗೆ ಬಂದಿದ್ದ. ಈ ಸಂದರ್ಭದಲ್ಲಿ ಬಾಲಕ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು, ಸ್ಥಳೀಯರ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಈ ನಡುವೆ ಕೆಲವರು ಬಾಲಕನನ್ನು ಪ್ರಚೋದಿಸಿ ಘೋಷಣೆ ಕೂಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಬಾಲಕ ಪಾಕ್ ಪರ ಘೋಷಣೆ ಕೂಗಿದ್ದನ್ನು ಆಗ ಸಲೂನ್‌ನಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಜಾಲತಾಣಗಳಲ್ಲಿ ವಿಪರೀತ ಹರಿದಾಡುತ್ತಿದೆ.
ಆರೋಪಿ ಬಾಲಕ ಅಪ್ರಾಪ್ತ ವಯಸ್ಕ ನಾಗಿದ್ದು, ವಿಡಿಯೋ ಪ್ರಚೋದನಾಕಾರಿ ಯಾದ್ದರಿಂದ ಅದನ್ನು ಪ್ರಸಾರ ಮಾಡ ಬಾರದು ಅಥವಾ ಶೇರ್ ಮಾಡಬಾರದು. ಅದೀಗ ಸಾಮಾಜಿಕ ಮಾಡಿದರೆ ಅಂತಹವರ ಮೇಲೆ ಪ್ರಕರಣ ದಾಖಲಿಸುವುದಾಗಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ಎಚ್ಚರಿಕೆ ನೀಡಿದ್ದಾರೆ.








