ಮೈಸೂರು : ಮೈಸೂರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಜಿಯಾಉಲ್ಲಾ, ಜಾವಿದ್ ಅಹಮದ್, ಸೋಹೈಲ್ ಹಾಗೂ ನುಯೇಜ್ ಬಂಧಿತ ಆರೋಪಿಗಳು.
10.30 ಲಕ್ಷ ರೂಪಾಯಿ ಮೌಲ್ಯದ 103 ಗ್ರಾಂ ಎಂ ಡಿ ಎಂ ಎ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಳಿ ಇದ್ದ ಇನ್ನೊವ ಕಾರು ಮತ್ತು 5 ಮೊಬೈಲ್ ಗಳನ್ನು ಸಹ ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








