Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ತರಕಾರಿಗಳಲ್ಲಿ ಸೀಸದ ಅಂಶ ಪತ್ತೆ : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢ

24/02/2026 6:19 AM

BIG NEWS : ಇಂದು ಕೊಪ್ಪಳ ಜಿಲ್ಲೆ ಬಂದ್ : ಶಾಲಾ-ಕಾಲೇಜುಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

24/02/2026 6:12 AM

ರಾಜ್ಯಾದ್ಯಂತ ಫೆ.28ರಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

24/02/2026 6:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ಕೊಪ್ಪಳ ಜಿಲ್ಲೆ ಬಂದ್ : ಶಾಲಾ-ಕಾಲೇಜುಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ
KARNATAKA

BIG NEWS : ಇಂದು ಕೊಪ್ಪಳ ಜಿಲ್ಲೆ ಬಂದ್ : ಶಾಲಾ-ಕಾಲೇಜುಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

By kannadanewsnow0524/02/2026 6:12 AM

ಕೊಪ್ಪಳ : ಜಿಲ್ಲೆಯ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈ ಐತಿಹಾಸಿಕ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ನಾಳೆ ಫೆಬ್ರವರಿ 24ರ ಸೋಮವಾರದಂದು ಕೊಪ್ಪಳ ಮತ್ತು ಭಾಗ್ಯನಗರ ಸೇರಿದಂತೆ ಜಿಲ್ಲಾದ್ಯಂತ ‘ಸ್ವಯಂಪ್ರೇರಿತ ಬಂದ್’ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ.

ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಕೇಂದ್ರದ ಎಲ್ಲಾ ಖಾಸಗಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.

ಅಲ್ಲದೆ, ಕೊಪ್ಪಳ ವಿಶ್ವವಿದ್ಯಾಲಯವು ನಾಳೆ ನಡೆಯಬೇಕಿದ್ದ ಸ್ನಾತಕೋತ್ತರ (PG) ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಮುಂದೂಡಲ್ಪಟ್ಟ ಪರೀಕ್ಷೆಗಳ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ವ್ಯಾಪಾರಸ್ಥರು, ಆಟೋ ಚಾಲಕರು ಮತ್ತು ವಿವಿಧ ಸಂಘಟನೆಗಳು ಸ್ವಯಂಪ್ರೇರಿತವಾಗಿ ಭಾಗವಹಿಸಲು ನಿರ್ಧರಿಸಿವೆ.

ಹಿನ್ನೆಲೆ?

ಕಳೆದ ವರ್ಷ ಫೆಬ್ರವರಿ 24 ರಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಲಕ್ಷಾಂತರ ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಅಂದು ಶ್ರೀಗಳು ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಾರ್ಖಾನೆಯನ್ನು ಶಾಶ್ವತವಾಗಿ ನಿಲ್ಲಿಸಲು ಗಡುವು ನೀಡಿದ್ದರು. ಆದರೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ಕಾರಣ, ಕಳೆದ 116 ದಿನಗಳಿಂದ ‘ಜಿಲ್ಲಾ ಬಚಾವೋ ಆಂದೋಲನ ಸಮಿತಿ’ಯು ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಹೋರಾಟದ ಕಿಚ್ಚನ್ನು ಮತ್ತಷ್ಟು ತೀವ್ರಗೊಳಿಸಲು ಈಗ ಜಿಲ್ಲಾ ಬಂದ್ ಘೋಷಿಸಲಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ತರಕಾರಿಗಳಲ್ಲಿ ಸೀಸದ ಅಂಶ ಪತ್ತೆ : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢ

24/02/2026 6:19 AM2 Mins Read

ರಾಜ್ಯಾದ್ಯಂತ ಫೆ.28ರಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

24/02/2026 6:05 AM2 Mins Read

ನಿವೃತ್ತಿಯ ನಂತರವೂ ನಿಲ್ಲಲ್ಲ ಸ್ಯಾಲರಿ: ಈ ಯೋಜನೆಯಿಂದ ಪ್ರತಿ ತಿಂಗಳು ಬರುತ್ತೆ ಕೈತುಂಬಾ ಹಣ !

24/02/2026 5:48 AM2 Mins Read
Recent News

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ತರಕಾರಿಗಳಲ್ಲಿ ಸೀಸದ ಅಂಶ ಪತ್ತೆ : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢ

24/02/2026 6:19 AM

BIG NEWS : ಇಂದು ಕೊಪ್ಪಳ ಜಿಲ್ಲೆ ಬಂದ್ : ಶಾಲಾ-ಕಾಲೇಜುಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

24/02/2026 6:12 AM

ರಾಜ್ಯಾದ್ಯಂತ ಫೆ.28ರಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

24/02/2026 6:05 AM

ನಿವೃತ್ತಿಯ ನಂತರವೂ ನಿಲ್ಲಲ್ಲ ಸ್ಯಾಲರಿ: ಈ ಯೋಜನೆಯಿಂದ ಪ್ರತಿ ತಿಂಗಳು ಬರುತ್ತೆ ಕೈತುಂಬಾ ಹಣ !

24/02/2026 5:48 AM
State News
KARNATAKA

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ತರಕಾರಿಗಳಲ್ಲಿ ಸೀಸದ ಅಂಶ ಪತ್ತೆ : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢ

By kannadanewsnow0524/02/2026 6:19 AM KARNATAKA 2 Mins Read

ಬೆಂಗಳೂರು : ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಭಾರಿ ಲೋಹವಾಗಿರುವ ಸೀಸದ ಅಂಶ ಮತ್ತು…

BIG NEWS : ಇಂದು ಕೊಪ್ಪಳ ಜಿಲ್ಲೆ ಬಂದ್ : ಶಾಲಾ-ಕಾಲೇಜುಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

24/02/2026 6:12 AM

ರಾಜ್ಯಾದ್ಯಂತ ಫೆ.28ರಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

24/02/2026 6:05 AM

ನಿವೃತ್ತಿಯ ನಂತರವೂ ನಿಲ್ಲಲ್ಲ ಸ್ಯಾಲರಿ: ಈ ಯೋಜನೆಯಿಂದ ಪ್ರತಿ ತಿಂಗಳು ಬರುತ್ತೆ ಕೈತುಂಬಾ ಹಣ !

24/02/2026 5:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.