ಬೆಂಗಳೂರು : ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಅವರು ಇದೀಗ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾ ಸ್ವಾಮಿ ಧರಿಸಿದ್ದ ಚೈನ್ ಮತ್ತು ಉಂಗುರದ ಕಸ್ಟಡಿ ನೀಡಲು ಮನವಿ ಮಾಡಿದ್ದಾರೆ.
ಒಡವೆ ರೇಣುಕಸ್ವಾಮಿ ತಾಯಿಕ ಕಸ್ಟಡಿಗೆ ನೀಡಲು ಕೋರ್ಟ್ ಒಪ್ಪಿಗೆ ನೀಡಿದ್ದು, ಕೆಲ ಷರತ್ತುಗಳನ್ನ ವಿಧಿಸಿ ಬೆಂಗಳೂರಿನ 57ನೇ ಸಿಸಿ ಹೆಚ್ಚು ಕೋರ್ಟ್ ಒಪ್ಪಿಗೆ ನೀಡಿದೆ. 2 ಲಕ್ಷದ ಬಾಂಡ್ ನೀಡಬೇಕು ಕೇಳಿದಾಗ ಹಾಜರುಪಡಿಸಬೇಕು. ಒಡವೆಯ ಸ್ವರೂಪ ಬದಲಿಸಬಾರದು, ಮಾರಾಟ ಮಾಡದಂತೆ ಷರತ್ತು ವಿಧಿಸಿದೆ.
ಇನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಕ್ಕಾಗಿ A3 ಪವನ್ ಅರ್ಜಿ ಸಲ್ಲಿಸಿದ್ದು, ಆರೋಪಿಗಳ ಮೊಬೈಲ್ ಮಾಡಿದ ಸ್ಥಳದ ಬಗ್ಗೆ A3 ವಕೀಲರು ತಕರಾರು ತೆಗೆದಿದ್ದಾರೆ. A3 ಪರ ವಕೀಲರು ಠಾಣೆಗೆ ತೆರಳಿ ಪರಿಶೀಲನೆಗೆ ಕೋರ್ಟ್ ಅನುಮತಿ ನೀಡಿದೆ. ಇಂದಿನ ಸಿಸಿಟಿವಿ ದೃಶ್ಯ ಕಾಯ್ದು ಕಾಮಾಕ್ಷಿಪಾಳ್ಯ ಠಾಣೆಗೆ ಸೂಚನೆ ನೀಡಲಾಗಿದೆ.








