ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪವಿಶಾಚಿಕ ಕೃತ್ಯ ನಡೆದಿದ್ದು ಮಾದಕ ಮಾತ್ರೆಗಳನ್ನು ನೀಡಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೆ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು 19 ವರ್ಷದ ವಿದ್ಯಾರ್ಥಿನಿ ಬೆಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ ನಡೆದಿದ್ದು ಈ ಕುರಿತು ಬೆಂಗಳೂರಿನ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬನ್ನೇರುಘಟ್ಟ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಪಶ್ಚಿಮ ಬಂಗಾಳ ಮೂಲದ ಡಿಕ್ಸಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಡಿಕ್ಸಿನ್ ಮತ್ತು ಮತ್ತೋರ್ವ ಗೆಳೆಯ ನಿಖಿಲ್ ಎಂಬಾತನೊಂದಿಗೆ ಸಂತ್ರಸ್ತೆ ವಿಲ್ಲಾಗೆ ತೆರಳಿದ್ದಳು.
ಈ ವೇಳೆ ಯುವತಿಗೆ ನಶೆ ಮತ್ತು ಮಾದಕ ಮಾತ್ರೆಗಳನ್ನು ನೀಡಿ ಡಿಕ್ಸಿನ್ ಮತ್ತು ನಿಖಿಲ್ ಅತ್ಯಾಚಾರಗೈದು ಹಲ್ಲೆ ನಡೆಸಿದ್ದಾರೆ. ಪ್ರೀತಿಯ ಹೆಸರಲ್ಲಿ ಇಬ್ಬರಿಂದ ಅತ್ಯಾಚಾರ ನಡೆದಿದಿ ಎಂಬ ಗಂಭೀರ ಆರೋಪವನ್ನು ಯುವತಿ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನು ಎಂದು ತಿಳಿದು ಬಂದಿದೆ.








